HomeLatest NewsBIG NEWS: ಮಹಾ ಕುಂಭಮೇಳದಲ್ಲಿ ಕಾಣೆಯಾಗಿದ್ದ ವ್ಯಕ್ತಿ 5 ತಿಂಗಳ ಬಳಿಕ ಪತ್ತೆ: ಸುರಕ್ಷಿತವಾಗಿ ಮನೆಗೆ...

BIG NEWS: ಮಹಾ ಕುಂಭಮೇಳದಲ್ಲಿ ಕಾಣೆಯಾಗಿದ್ದ ವ್ಯಕ್ತಿ 5 ತಿಂಗಳ ಬಳಿಕ ಪತ್ತೆ: ಸುರಕ್ಷಿತವಾಗಿ ಮನೆಗೆ ಬಂದ ಕಥೆಯೇ ರೋಚಕ!

ಚಿಕ್ಕಮಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕಾಣೆಯಾಗಿದ್ದ ಅರ್ಚಕರೊಬ್ಬರು ೫ ತಿಂಗಳ ಬಳಿಕ ಪತ್ತೆಯಾಗಿರುವ ಘಟನೆ ನಡೆದಿದೆ. ಕುಂಭಮೇಳಕ್ಕೆ ಹೋಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿ, ಆಘಾತದಲ್ಲಿದ್ದ ಕುಟುಂಬಕ್ಕೆ ಹೋದ ಜಿವ ಬಂದಂತಾಗಿದ್ದು, ವ್ಯಕ್ತಿ ಮನೆಗೆ ಮರಳಿದ್ದಾರೆ.

ಚಿಕ್ಕಮಗಳೂರಿನ ಕಡೂರಿನಲ್ಲಿ ಈ ಘಟನೆ ನಡೆದಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ತಂಗಲಿ ಗ್ರಾಮದ ಚೆನ್ನಕೇಶವ ದೇವಾಲಯದ ಅರ್ಚಕ ನರಸಿಂಹ ಮೂರ್ತಿ (75) ಪ್ರಯಾಗ್ ರಾಜ್ ಗೆ ಹೋಗಿದ್ದಾಗ ಮಹಾ ಕುಂಭಮೇಳದಲ್ಲಿ ಕುಟುಂಬದ ಇತರ ಸದಸ್ಯರಿಂದ ಬೇರ್ಪಟ್ಟು ನಾಪತ್ತೆಯಾಗಿದ್ದರು. ಸಾಕಷ್ಟು ಹುಡುಕಾಟ ನಡೆಸಿದರೂ ನರಸಿಂಹ ಮೂರ್ತಿ ಸುಳಿವಿರಲಿಲ್ಲ. ಇದೀಗ ಬರೋಬ್ಬರಿ 5 ತಿಂಗಳ ಬಳಿಕ ಅವರಾಗಿಯೇ ಮನೆಗೆ ವಾಪಾಸ್ ಆಗಿದ್ದು, ಕುಟುಂಬದವರ ಸಂತಸಕ್ಕೆ ಪಾರವೇ ಇಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನರಸಿಂಹ ಮೂರ್ತಿ ಜನವರಿಯಲ್ಲಿ ಕುಟುಂಬದ ಜೊತೆಗೆ ಪ್ರಯಾಗ್ ರಾಜ್ ನ ಕುಂಭಮೇಳಕ್ಕೆ ತೆರಳಿದ್ದರು. ಈ ವೇಳೆ ಜನಸಂದಣಿ ನಡುವೆ ಕುಟುಂಬದಿಂದ ಬೇರ್ಪಟ್ಟು ಕಾಣೆಯಾಗಿಬಿಟ್ಟಿದ್ದರು. ಕುಟುಂಬದವರು ಸಾಕಷ್ಟು ಹುಡುಕಾಟ ನಡೆಸಿದರೂ ಎಲ್ಲಿಯೂ ಸೊಕ್ಕಿರಲಿಲ್ಲ. ಬಳಿಕ ಕುಟುಖ್ಬದವರು ಪ್ರಯಾಗ್ ರಾಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರಿಗೂ ಅವರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಕುಟುಂಬದವರು ದು:ಖದಲ್ಲಿಯೇ ಚಿಕ್ಕಮಗಳೂರಿಗೆ ವಾಪಾಸ್ ಆಗಿದ್ದರು.

ನರಸಿಂಹ ಮೂರ್ತಿ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಅವರನ್ನು ಹುಡುಕುವುದೂ ಕೂಡ ಕಷ್ಟಕರವಾಗಿತ್ತು. ನಾಪತ್ತೆಯಾಗಿದ್ದ ನರಸಿಂಹಮೂರ್ತಿ ಮುಂಬೈನ ಶ್ರದ್ಧಾ ರೀಹ್ಯಾಬಿಟೇಷನ್ ಸಂಸ್ಥೆಯ ಕಣ್ಣಿಗೆ ಬಿದ್ದಿದ್ದಾರೆ. ಸಂಸ್ಥೆಯವರು ನರಸಿಂಹಮೂರ್ತಿಯವರನ್ನು ರಕ್ಷಿಸಿ ನಾಲ್ಕು ತಿಂಗಳ ಕಾಲ ಆರೀಕೆ ಮಾಡಿ ಚಿಕಿತ್ಸೆ ನೀಡಿದ್ದಾರೆ. ಅಲ್ಲದೇ ನರಸಿಂಹ ಮೂರ್ತಿಯವರನ್ನು ಗುಣಮುಖರನ್ನಾಗಿ ಮಾಡಿ ಸುರಕ್ಷಿತವಾಗಿ ಹುಟ್ಟೂರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ನರಸಿಂಹ ಮೂರ್ತಿ ಅವರ ಮಗ ಬದರಿನಾಥ್ ಸಂತಸ ಹಂಚಿಕೊಂಡಿದ್ದಾರೆ. ಅಲ್ಲದೇ ಶ್ರದ್ಧಾ ರೀಹ್ಯಾಬಿಟೇಷನ್ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular