HomeKarnatakaಪತ್ನಿ ಅಗಲಿಕೆ ನೋವಲ್ಲೇ ಆಕೆ ಸಮಾಧಿ ಬಳಿ ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿ ಅಗಲಿಕೆ ನೋವಲ್ಲೇ ಆಕೆ ಸಮಾಧಿ ಬಳಿ ಆತ್ಮಹತ್ಯೆಗೆ ಶರಣಾದ ಪತಿ

ಚಿಕ್ಕಬಳ್ಳಾಪುರ: ಪತ್ನಿ ಅಗಲಿಕೆಯಿಂದ ಮನನೊಂದ ಪತಿ ಆಕೆಯ ಸಮಾಧಿ ಬಳಿಯೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ.

ತೀಮಾಕಹಳ್ಳಿಬಳಿ ಸ್ಮಶಾನದಲ್ಲಿ ಪತ್ನಿ ಸಮಾಧಿ ಬಳಿಯೇ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 38 ವರ್ಷದ ಗುರುಮೂರ್ತಿ ಮೃತ ವ್ಯಕ್ತಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ನಿ ಮೌನಿಕಾ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿಯ ಸಾವಿನ ನೋವಿನಲ್ಲಿದ್ದ ಗುರುಮೂರ್ತಿ, ಇಂದು ಪತ್ನಿ ಸಮಾಧಿ ಪೂಜೆ ನೆರವೇರಿಸಿ ಬಳಿಕ ಅಲ್ಲಿಯೇ ಮರಕ್ಕೆ ನೇನು ಬಿಗಿದುಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular