HomeKarnatakaBIG NEWS: ಅಪ್ಪನನ್ನು ಕೊಲ್ಲಲು ಯತ್ನಿಸಿ ತಮ್ಮನನ್ನು ಹತ್ಯೆಗೈದಿದ್ದ ವ್ಯಕ್ತಿ: ಅಪರಾಧಿಗೆ 10 ವರ್ಷ ಜೈಲುಶಿಕ್ಷೆ...

BIG NEWS: ಅಪ್ಪನನ್ನು ಕೊಲ್ಲಲು ಯತ್ನಿಸಿ ತಮ್ಮನನ್ನು ಹತ್ಯೆಗೈದಿದ್ದ ವ್ಯಕ್ತಿ: ಅಪರಾಧಿಗೆ 10 ವರ್ಷ ಜೈಲುಶಿಕ್ಷೆ ಪ್ರಕಟ

ಚಿಕ್ಕಬಳ್ಳಾಪುರ: ಸಹೋದರನನ್ನೇ ಹತ್ಯೆಗೈದಿದ್ದ ಕೊಲೆ ಅಪರಾಧಿಗೆ ನ್ಯಾಯಾಲಯ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಮೋಹನ್ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. 2021ರ ಮೇ 11 ರಂದು ಚಿಕ್ಕಬಳ್ಳಾಪುರದ ಚೇಳೂರಿನಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ಪ್ರಕಟಿಸಿದೆ.

ಒಳ್ಳೆ ಹುಡುಗಿ ನೋಡಿ ಮದುವೆ ಮಾಡಿಲ್ಲ ಎಂಬ ಕಾರಣಕ್ಕೆ ಮೋಹನ್, ತನ್ನ ತಂದೆಯ ಜೊತೆ ಜಗಳ ಮಾಡಿ ಅವರನ್ನು ಹತ್ಯೆ ಮಾಡಲು ಮುಂದಾಗಿದ್ದ. ಈ ವೇಳೆ ಸಹೋದರ ಮೋಹನ್ ನನ್ನು ತಡೆದಿದ್ದಾನೆ. ಅಪ್ಪನ ಹತ್ಯೆಗೆ ಅಡ್ಡ ಬಂದ ತಮ್ಮನನ್ನೇ ಮೋಹನ್ ಕೊಲೆ ಮಾಡಿದ್ದ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular