ಚಿಕ್ಕಬಳ್ಳಾಪುರ: ಲಾಂಗ್ ನಲ್ಲಿ ಕೇಕ್ ಕತ್ತರುಸಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿದ್ದ ಆಟೋ ಚಾಲಕನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕ ಅನಿಲ್ ಕುಮಾರ್ ಬಂಧಿತ ಆರೋಪಿ. ಅನಿಲ್ ಕುಮಾರ್ ತನ್ನ ಹುಟ್ಟುಹಬ್ಬದ ದಿನದಂದು ಕಿಂಗ್ ಎಂದು ಕೇಕ್ ಮೇಲೆ ಬರೆಸಿ ಲಾಂಗ್ ನಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನು ಗಮನಿಸಿದ ಗೌರಿಬಿದನೂರು ಠಾಣೆ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

