HomeKarnatakaರೈತರ ನಿದ್ದೆಗೆಡಿಸಿದ್ದ ದಾಳಿಂಬೆ ಕಳ್ಳರು, ಖರೀದಿಸಿದ ವ್ಯಾಪಾರಿಗಳು ಅರೆಸ್ಟ್

ರೈತರ ನಿದ್ದೆಗೆಡಿಸಿದ್ದ ದಾಳಿಂಬೆ ಕಳ್ಳರು, ಖರೀದಿಸಿದ ವ್ಯಾಪಾರಿಗಳು ಅರೆಸ್ಟ್

ಚಿಕ್ಕಬಳ್ಳಾಪುರ: ರೈತರ ನಿದ್ದೆ ಕೆಡಿಸಿದ್ದ ದಾಳಿಂಬೆ ಕಳ್ಳರು ಮತ್ತು ಕಳ್ಳರಿಂದ ದಾಳಿಂಬೆ ಖರೀದಿ ಮಾಡಿದ್ದ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಕ್ರಾಸ್, ಅಜ್ಜಾವರ, ಚದಲಪುರ, ಸಾಧೇನಹಳ್ಳಿ, ಪಟ್ಟೆನಹಳ್ಳಿ, ನಾಯನಹಳ್ಳಿ ಮೊದಲಾದ ಕಡೆಗಳಲ್ಲಿ ತೋಟಗಳಲ್ಲಿ ರೈತರು ಬೆಳೆದಿದ್ದ ದಾಳಿಂಬೆ ಕಳ್ಳತನ ಮಾಡಲಾಗಿತ್ತು. ಇದರಿಂದಾಗಿ ರೈತರು ಕಂಗಾಲಾಗಿದ್ದರು. ಕಾರ್ಯಾಚರಣೆ ನಡೆಸಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಚಿಕ್ಕಬಳ್ಳಾಪುರ ತಾಲೂಕಿನ ಕರ್ಲಹಳ್ಳಿ ಗ್ರಾಮದ ಕೆ.ಬಿ. ರಾಜು(23) ಮತ್ತು ಶ್ರೀಕಾಂತ್(19) ಎಂಬುವರನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೋಜು ಮಸ್ತಿ ಮಾಡುತ್ತಿದ್ದ ಇವರು ದುಡಿಮೆ ಮಾಡುವುದನ್ನು ಬಿಟ್ಟು ರೈತರ ದಾಳಿಂಬೆ ತೋಟಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೋಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಇವರಿಂದ ಕಳವು ಮಾಡಿದ ದಾಳಿಂಬೆ ಖರೀದಿಸಿದ ಹಣ್ಣಿನ ವ್ಯಾಪಾರಿಗಳಾದ ನಂಜುಂಡಪ್ಪ, ಸೈಯದ್ ಮನ್ಸೂರ್ ಅವರನ್ನು ಕೂಡ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular