HomeBeautyತ್ವಚೆಯ ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಕಡಲೆಹಿಟ್ಟು

ತ್ವಚೆಯ ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಕಡಲೆಹಿಟ್ಟು

ಕಡಲೆ ಹಿಟ್ಟಿನಿಂದ ರುಚಿ ರುಚಿಯಾದ ತಿಂಡಿಗಳನ್ನು ಸವಿಯಬಹುದು. ಜೊತೆಗೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ‍್ಳಬಹುದು. ಈ ಟಿಪ್ಸ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ.

*ಡ್ರೈ ಸ್ಕಿನ್ ಹೋಗಲಾಡಿಸಲು ಕಡಲೆಹಿಟ್ಟು ಬಹಳ ಉಪಯೋಗಕಾರಿ. ಇದಕ್ಕೆ ಹಾಲು, ಜೇನುತುಪ್ಪ, 1 ಚಿಟಿಕೆ ಅರಶಿಣ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಮಾಡುತ್ತಾ ಬಂದರೆ ಚರ್ಮದ ತೇವಾಂಶ ಹೆಚ್ಚಿಸಿ ಡ್ರೈ ಸ್ಕಿನ್ ಸಮಸ್ಯೆ ದೂರವಾಗುತ್ತದೆ.

* ಆಯಿಲ್ ಸ್ಕಿನ್ ಹೋಗಲಾಡಿಸಲು ಕಡಲೆಹಿಟ್ಟಿಗೆ ಕೆಲವು ಹನಿ ರೋಸ್ ವಾಟರ್ ನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, ಪ್ಯಾಕ್ ಒಣಗಿದ ನಂತರ ಅದನ್ನು ತೊಳೆಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಮೊಡವೆ ಸಮಸ್ಯೆ ನಿವಾರಿಸಲು ಕಡಲೆ ಹಿಟ್ಟಿಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆ ಸಮಸ್ಯೆ ದೂರವಾಗುತ್ತದೆ.

* ಮುಖದಲ್ಲಿ ಸೇರಿಕೊಂಡ ಕೊಳೆ, ಧೂಳನ್ನು ಹೋಗಲಾಡಿಸಲು ಕಡಲೆ ಹಿಟ್ಟಿನ ಜೊತೆಗೆ ಸೌತೆಕಾಯಿ ರಸವನ್ನು ಮಿಕ್ಸ್ ಮಾಡಿ ಹಚ್ಚಿ ಒಣಗಿದ ನಂತರ ತೊಳೆಯರಿ.

* ಕಪ್ಪಾದ ಮುಖದ ಕಾಂತಿ ಹೆಚ್ಚಿಸಲು ಕಡಲೆಹಿಟ್ಟು, ನಿಂಬೆ ರಸ, ಅರಶಿಣ, ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಚರ್ಮ ನಯವಾಗುವುದರ ಜೊತೆಗೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular