HomeEntertainmentರಾಜ್‌ಕುಮಾರ್‌ಗೆ ಬದುಕಿದ್ದಾಗಲೇ ತಿಳಿದಿದ್ದರೆ ಸಮಾಧಿಗೆ ಎರಡೂವರೆ ಎಕರೆ ಜಾಗ ಬೇಡ ಎನ್ನುತ್ತಿದ್ರು: ನಟ ಚೇತನ್ ಅಹಿಂಸಾ

ರಾಜ್‌ಕುಮಾರ್‌ಗೆ ಬದುಕಿದ್ದಾಗಲೇ ತಿಳಿದಿದ್ದರೆ ಸಮಾಧಿಗೆ ಎರಡೂವರೆ ಎಕರೆ ಜಾಗ ಬೇಡ ಎನ್ನುತ್ತಿದ್ರು: ನಟ ಚೇತನ್ ಅಹಿಂಸಾ

ರಾಜ್‌ಕುಮಾರ್ ಜನ್ಮ ದಿನಾಚರಣೆಯ ದಿನದಂದು ಟಿವಿ9 ಹಂಚಿಕೊಂಡಿದ್ದ ‘ಅಣ್ಣಾವ್ರ ಸಮಾಧಿ ಅಭಿಮಾನಿಗಳ ಪಾಲಿಗೆ ದೇವಸ್ಥಾನ’ ಎಂಬ ಪೋಸ್ಟ್ ಶೇರ್ ಮಾಡಿ ಟ್ವೀಟ್ ಮಾಡಿದ್ದ ನಟ ಚೇತನ್ ಅಹಿಂಸಾ ಓರ್ವ ನಟನಿಗೆ ಬೆಂಗಳೂರಿನ ಕೇಂದ್ರದಲ್ಲಿ ಎರಡೂವರೆ ಎಕರೆ ಜಾಗ ನೀಡಿ ಸ್ಮಾರಕ ಮಾಡುವುದು ಎಷ್ಟು ಸರಿ ಎಂದು ಬರೆದುಕೊಂಡಿದ್ದರು.

ಚೇತನ್ ಹಂಚಿಕೊಂಡ ಈ ಪೋಸ್ಟ್‌ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಚಿತ್ರರಂಗದ ಕೆಲ ಕಲಾವಿದರನ್ನು ಕೆರಳಿಸಿತ್ತು. ಕೂಡಲೇ ಚೇತನ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. ಆದರೆ ಚೇತನ್ ಅಹಿಂಸಾ ತಾನೂ ಕೂಡ ರಾಜ್ ಅಭಿಮಾನಿಯಾಗಿದ್ದು, ಅವರ ವಿರುದ್ಧ ಮಾತನಾಡುತ್ತಿಲ್ಲ, ಅವರನ್ನು ಚಿಕ್ಕ ವಯಸ್ಸಿನಿಂದ ಹಿಂಬಾಲಿಸುತ್ತಾ ಬಂದಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೇ ಕನ್ನಡದ ಹಲವು ಕಲಾವಿದರನ್ನು ಉಲ್ಲೇಖಿಸಿ ಅವರುಗಳಿಗೆ ಹೇಗೆ ಅವರವರ ಹುಟ್ಟೂರಿನಲ್ಲಿ ಸಮಾಧಿಗೆ ಜಾಗ ನೀಡಿದ್ದರೋ ಅದೇ ರೀತಿ ರಾಜ್‌ಕುಮಾರ್‌ರಿಗೂ ನೀಡಬೇಕಿತ್ತು. ಇದು ಸರ್ಕಾರ ತನ್ನ ಬೇಳೆ ಬೇಯಿಸಿಕೊಳ್ಳಲು ಮಾಡಿದ್ದ ಕೆಲಸ, ನಾನು ಮಾತನಾಡಿದ್ದರಲ್ಲಿ ತಪ್ಪಿಲ್ಲ, ಕ್ಷಮೆ ಕೇಳಲ್ಲ ಎಂದಿದ್ದರು.

ಇದಾದ ಬೆನ್ನಲ್ಲೇ ಚೇತನ್‌ಗೆ ಮುತ್ತಿಗೆ ಹಾಕಿದ್ದ ರಾಜ್ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದರು. ವಾಣಿಜ್ಯ ಮಂಡಳಿ ಸದಸ್ಯ ಸಾರಾ ಗೋವಿಂದು ಚೇತನ್‌ಗೆ ಏಕವಚನದಲ್ಲೇ ಬೈದು ತಮ್ಮ ಕೋಪ ಹೊರಹಾಕಿದ್ದರು. ಇದರೆಲ್ಲದರ ನಡುವೆ ಚೇತನ್ ಕ್ಷಮೆಯನ್ನು ಸಹ ಯಾಚಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಇದೀಗ ಮತ್ತೆ ಆ ಕುರಿತು ಪ್ರತಿಕ್ರಿಯಿಸಿರುವ ಚೇತನ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ‘ಒಂದುವೇಳೆ ರಾಜ್‌ಕುಮಾರ್ ಬದುಕಿದ್ದಾಗಲೇ ತಿಳಿದಿದ್ದರೆ ಸ್ಮಾರಕಕ್ಕೆ ಕೊಟ್ಟಿರುವ ಜಾಗ ಬೇಡ ಎನ್ನುತ್ತಿದ್ದರು’ ಎಂದು ಟ್ವೀಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular