
ಮೃತರನ್ನು ಚೆಸ್ಕಾಂ ಸಿಬ್ಬಂದಿ ಬಸವರಾಜ್ ತೆಗ್ಗಿ (26) ಎಂದು ಗುರುತಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಮಾರ್ನಾಲು ನಿವಾಸಿಯಾದ ಬಸವರಾಜ್ ಕಳೆದ 5 ವರ್ಷಗಳಿಂದ ವಿರಾಜಪೇಟೆ ಚೆಸ್ಕಾಂ ನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಮನೆಯೊಂದರಲ್ಲಿ ವಿದ್ಯುತ್ ಕೆಲಸ ಮಾಡುವಾಗ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

