HomeKarnatakaBIG NEWS: ಮುಂದುವರೆದ ಚಿರತೆ ದಾಳಿ; 6 ಮೇಕೆಗಳನ್ನು ತಿಂದು ತೇಗಿದ ಚೀತಾ

BIG NEWS: ಮುಂದುವರೆದ ಚಿರತೆ ದಾಳಿ; 6 ಮೇಕೆಗಳನ್ನು ತಿಂದು ತೇಗಿದ ಚೀತಾ

ಮಂಡ್ಯ: ಮಂಡ್ಯದಲ್ಲಿ ಚಿರತೆ ದಾಳಿ ಮುಂದುವರೆದಿದ್ದು, 6 ಮೇಕೆಗಳನ್ನು ಚಿರತೆ ಕೊಂದು ತೇಗಿದ ಘಟನೆ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ನಡೆದಿದೆ.

ನಾಗೇಗೌಡ ಎಂಬ ರೈತ ಕೊಟ್ಟಿಗೆಯಲ್ಲಿ 18 ಮೇಕೆಯನ್ನು ಕಟ್ಟಿದ್ದ. ತಡರಾತ್ರಿ ಕೊಟ್ಟಿಗೆಗೆ ದಾಳಿ ನಡೆಸಿರುವ ಚಿರತೆ 6 ಮೇಕೆಗಳನ್ನು ಕೊಂದಿದ್ದು, ನಾಲ್ಕು ಮೇಕೆಗಳನ್ನು ಹೊತ್ತೊಯ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಬೆಳಿಗ್ಗೆ ರೈತ ಕೊಟ್ಟಿಗೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ನೀಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular