HomeLatest Newsಚಿರತೆ ದಾಳಿ: 27 ಕುರಿಗಳು ದಾರುಣ ಸಾವು

ಚಿರತೆ ದಾಳಿ: 27 ಕುರಿಗಳು ದಾರುಣ ಸಾವು

ದಾವಣಗೆರೆ: ಚಿರತೆ ದಾಳಿಗೆ 27 ಕುರಿಗಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆಸಿರಿಗೆರೆ ಅಡಿಕೆ ತೋಟದಲ್ಲಿ ನಡೆದಿದೆ.

ಅಡಿಕೆ ತೋಟದಲ್ಲಿ ಬೀಡು ಬಿಟ್ಟಿದ್ದ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿದೆ. ಮೃತಕುರಿಗಳು ಚಿಕ್ಕೋಡಿ ತಾಲೂಕಿನ ಸದಲಗ ಗ್ರಾಮದ ಸೋಮಣ್ಣ ಎಂಬುವವರಿಗೆ ಸೇರಿದ್ದವು.

ತಡರಾತ್ರಿ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿದ್ದು, ತೋಟದಲ್ಲಿ ಎಲ್ಲೆಂದರಲ್ಲಿ ಕುರಿಗಳು ಸಾವನ್ನಪ್ಪಿ ಬಿದ್ದಿವೆ. ಘಟನ ಅಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular