HomeIndiaಮೇ 5 ರಂದು ವರ್ಷದ ಮೊದಲ ಚಂದ್ರಗ್ರಹಣ: ಇಲ್ಲಿದೆ ಸಂಪೂರ್ಣ ವಿವರ

ಮೇ 5 ರಂದು ವರ್ಷದ ಮೊದಲ ಚಂದ್ರಗ್ರಹಣ: ಇಲ್ಲಿದೆ ಸಂಪೂರ್ಣ ವಿವರ

ಈ ವರ್ಷದ ಮೊದಲ ಚಂದ್ರಗ್ರಹಣ ಮೇ 5 ರಂದು ಗೋಚರಿಸಲಿದೆ. ಶುಕ್ರವಾರ ಸಂಭವಿಸುವುದು ಪೆನಂಬ್ರಾಲ್ ಚಂದ್ರ ಗ್ರಹಣವಾಗಿದ್ದು ಮಾರ್ಚ್ 5 ರಂದು ರಾತ್ರಿ 8.45 ರಿಂದ ಆರಂಭವಾಗಿ ಮೇ 6 ರ ಮುಂಜಾನೆ 1.02 ಕ್ಕೆ ಗ್ರಹಣ ಕೊನೆಗೊಳ್ಳುತ್ತದೆ. ಒಟ್ಟು 4 ಗಂಟೆ 18 ನಿಮಿಷಗಳವರೆಗೆ ಗ್ರಹಣ ಗೋಚರಿಸಲಿದೆ.

ಅಂಟಾರ್ಟಿಕಾ, ಏಷ್ಯಾ, ರಷ್ಯಾ, ಆಫ್ರಿಕಾ ಸೇರಿದಂತೆ ಪ್ರಪಂಚದ ಹೆಚ್ಚಿನ ಭಾಗಗಳಿಂದ ಚಂದ್ರಗ್ರಹಣ ಗೋಚರಿಸುತ್ತದೆ. ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂಮಿ, ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋಗುವ ಘಟನೆಯೇ ಚಂದ್ರಗ್ರಹಣ. ಗ್ರಹಣದ ಸಮಯದಲ್ಲಿ ಸೂರ್ಯ , ಭೂಮಿ ಮತ್ತು ಚಂದ್ರ ಯಾವ ರೇಖೆಯಲ್ಲಿ ಇರುತ್ತಾರೆ ಎಂಬುದರ ಆಧಾರದ ಮೇಲೆ ಮೂರು ವಿಧದ ಚಂದ್ರಗ್ರಹಣಗಳಿವೆ .

ಮೇ 5 ರಂದು ಪೆನಂಬ್ರಾಲ್ ಚಂದ್ರಗ್ರಹಣವಾಗಿರುತ್ತದೆ. ಈ ಹಂತದಲ್ಲಿ ಚಂದ್ರನು ಭೂಮಿಯ ಪೆನಂಬ್ರಾ ಅಥವಾ ಅದರ ನೆರಳಿನ ಮಸುಕಾದ ಹೊರಭಾಗದ ಮೂಲಕ ಚಲಿಸುತ್ತದೆ, ಇದು ವೀಕ್ಷಿಸಲು ತುಂಬಾ ಕಷ್ಟಕರವಾಗಿರುತ್ತದೆ. ಮುಂದಿನ ಚಂದ್ರ ಗ್ರಹಣವು ಅಕ್ಟೋಬರ್ 28, 2023 ರಂದು ಸಂಭವಿಸುತ್ತದೆ

For Latest News Updates, Join Our Whatsapp Community🚩
RELATED ARTICLES

Most Popular