HomeKarnatakaBIG NEWS: ಜೋಕಾಲಿಯಾಡುತ್ತಿದ್ದಾಗ ದುರಂತ; ಕಟ್ಟಡದ ಮೇಲಿಂದ ಬಿದ್ದು ಶಿಕ್ಷಕಿ ದುರ್ಮರಣ

BIG NEWS: ಜೋಕಾಲಿಯಾಡುತ್ತಿದ್ದಾಗ ದುರಂತ; ಕಟ್ಟಡದ ಮೇಲಿಂದ ಬಿದ್ದು ಶಿಕ್ಷಕಿ ದುರ್ಮರಣ

ಚಾಮರಾಜನಗರ: ಶಿಕ್ಷಕಿಯೊಬ್ಬರು ಮಹಡಿ ಮೇಲಿನಿಂದ ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದೆ.

ಜೆ.ಪಿ.ಮಲ್ಲಪ್ಪಪುರಂ ಬಡಾವಣೆಯ ಪುಟ್ಟಿ ಮೃತ ಶಿಕ್ಷಕಿ. ಮನೆಯ ಮೇಲೆ ಕಟ್ಟಿದ್ದ ಜೋಕಾಲಿ ಆಡುತ್ತಿದ್ದ ಶಿಕ್ಷಕಿ ಆಯತಪ್ಪಿ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. ಕೊಳ್ಳೆಗಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಮೈಸೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಳಂದೂರು ತಾಲೂಕಿನ ಮಾಂಬಳ್ಳಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೊಳ್ಳೆಗಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular