HomeLatest NewsSHOCKING: ಚಿರತೆ ಸೆರೆಗೆಂದು ಇಟ್ಟಿದ್ದ ಬೋನಿನಲ್ಲಿ ಲಾಕ್ ಆದ ವ್ಯಕ್ತಿ: ಹೊರಬರಲಾಗದೇ ಪರದಾಟ!

SHOCKING: ಚಿರತೆ ಸೆರೆಗೆಂದು ಇಟ್ಟಿದ್ದ ಬೋನಿನಲ್ಲಿ ಲಾಕ್ ಆದ ವ್ಯಕ್ತಿ: ಹೊರಬರಲಾಗದೇ ಪರದಾಟ!

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಚಿರತೆ ಹಾವಳಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬಂದಿಗಳು ಬೋನುಗಳನ್ನಿಟ್ಟು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಲಾಕ್ ಆಗಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಂಗಾವಾಡಿ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಚಿರತೆ ಸೆರೆಗೆಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಇಟ್ಟಿದ್ದ ಬೋನಿನಲ್ಲಿ ಕಿಟ್ಟಿ ಎಂಬ ವ್ಯಕ್ತಿ ಲಾಕ್ ಆಗಿದ್ದಾರೆ.

ಬೋನಿನ ಬಳಿ ವ್ಯಕ್ತಿ ಬರುತ್ತಿದ್ದಂತೆ ವ್ಯಕ್ತಿ ಸಮೇತ ಬೋನಿನ ಬಾಗಿಲು ಲಾಕ್ ಆಗಿದೆ. ಹೊರಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಗಿಲ್ಲ. ಬೋನಿನ ಒಳಗೆ ಚಿರತೆ ಬದಲು ವ್ಯಕ್ತಿಯೊಬ್ಬ ಇರುವುದು ಕಂಡ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬರೋಬ್ಬರಿ ಮೂರು ಗಂಟೆಗಳ ಕಾಲ ವ್ಯಕ್ತಿ ಬೋನಿನಲ್ಲಿಯೇ ಪರದಾಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವ್ಯಕ್ತಿಯನ್ನು ಬೋನಿನಿಂದ ಹೊರ ತೆಗೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular