HomeKarnatakaಅಂಗಡಿ ಬಾಗಿಲು ಮುರಿದು ಬಾಳೆಹಣ್ಣು ತಿಂದ ಕಾಡಾನೆ....!

ಅಂಗಡಿ ಬಾಗಿಲು ಮುರಿದು ಬಾಳೆಹಣ್ಣು ತಿಂದ ಕಾಡಾನೆ….!

ಬಾಳೆಹಣ್ಣಿಗಾಗಿ ಅಂಗಡಿಗೆ ನುಗ್ಗಿದ ...

ಕಾಡಂಚಿನ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಅದರಲ್ಲಿದ್ದ ಕಬ್ಬನ್ನು ಸವಿದ ಕಾಡಾನೆಯೊಂದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಕಾಡಾನೆಯೊಂದು ಬಾಳೆಹಣ್ಣು ತಿಂದಿರುವ ಮತ್ತೊಂದು ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ಚಾಮರಾಜನಗರ ತಾಲೂಕಿನ ಗಡಿಯಂಚಿನ ಗ್ರಾಮ ಹಾಸನೂರಿನಲ್ಲಿ ನಡೆದಿದ್ದು, ಕಾಡಾನೆಯೊಂದು ಅಂಗಡಿ ಬಾಗಿಲು ಮುರಿದು ಬಾಳೆಹಣ್ಣನ್ನು ಸವಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸನೂರು ಗ್ರಾಮ ಅರಣ್ಯದ ನಡುವೆ ಇದ್ದು, ರಾಜ್ಯದ ಕಟ್ಟ ಕಡೆಯ ಗಡಿಯಾಗಿದೆ. ಈ ಪ್ರದೇಶದಲ್ಲಿ ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳ ಸಂಚಾರ ಸಾಮಾನ್ಯವಾಗಿದೆ.

 ಆನೆ ನೋಡಿ ಗ್ರಾಮಸ್ಥರು ಕಿರುಚಾಡುತ್ತಿದ್ದಂತೆ, ಆನೆ ಅಲ್ಲಿಂದ ಹೊರಟು ಹೋಗಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡ್ತಾ ಇದೆ. ಮಸ್ತ್ ಆನೆ ಎಂದು ಎಲ್ಲರೂ ಕಾಮೆಂಟ್ ಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular