HomeKarnatakaBIG NEWS: ಕೃಷಿ ಸಚಿವರ ಲಂಚಾವತಾರದ ವಿರುದ್ಧ ಆಕ್ರೋಶ; ಸಚಿವ ಚಲುವರಾಯಸ್ವಾಮಿ ವಿರುದ್ಧ 'ಪೇ ಸಿಎಸ್'...

BIG NEWS: ಕೃಷಿ ಸಚಿವರ ಲಂಚಾವತಾರದ ವಿರುದ್ಧ ಆಕ್ರೋಶ; ಸಚಿವ ಚಲುವರಾಯಸ್ವಾಮಿ ವಿರುದ್ಧ ‘ಪೇ ಸಿಎಸ್’ ಅಭಿಯಾನ ಆರಂಭ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಕಾಂಗ್ರೆಸ್ ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ‘ಪೇ ಸಿಎಂ’ ಅಭಿಯಾನ ಮಾಡಿ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರದ ಕೃಷಿ ಸಚಿವರ ವಿರುದ್ಧ ಬಿಜೆಪಿ ‘ಪೇ ಸಿಎಸ್’ ಅಭಿಯಾನ ಆರಂಭಿಸಿದೆ.

ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳು ಲಂಚದ ಆರೋಪ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆರಂಭಿಸಿದೆ. ಈ ನಡುವೆ ಸಚಿವ ಚಲುವರಾಯಸ್ವಾಮಿ ವಿರುದ್ಧ ಬಿಜೆಪಿ ಕರ್ನಾಟಕ ಸಪೋರ್ಟರ್ಸ್ ಗ್ರೂಪ್ ‘Paycs’ ಅಭಿಯಾನ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಪೇ ಸಿಎಂ’ ಮಾದರಿಯಲ್ಲಿಯೇ ‘ಪೇ ಸಿಎಸ್’ ಅಭಿಯಾನ ಆರಂಭವಾಗಿದ್ದು, ನಮ್ಮಲ್ಲಿ ಪೇಟಿಎಂ ಕೂಡ ಲಭ್ಯವಿದೆ. ಧಾರಾಳವಾಗಿ ಸ್ಕ್ಯಾನ್ ಮಾಡಿ ಲಂಚ ಪಾವತಿ ಮಾಡಿ… ಇಂತಿ ನಿಮ್ಮ ಭ್ರಷ್ಟ ಚಲುವರಾಯಸ್ವಾಮಿ ಅಲಿಯಾಸ್ ಲಂಚ ಸ್ವಾಮಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಲೈನ್ ಕೂಡ ಹಾಕಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular