HomeKarnatakaಸಿಇಟಿ: ಜೂ. 10 ರಿಂದ ಎಂಜಿನಿಯರಿಂಗ್, ಕೃಷಿ, ನರ್ಸಿಂಗ್ ಇತರೆ ಕೋರ್ಸ್ ಆಪ್ಷನ್ ದಾಖಲಿಸುವ ಪ್ರಕ್ರಿಯೆ...

ಸಿಇಟಿ: ಜೂ. 10 ರಿಂದ ಎಂಜಿನಿಯರಿಂಗ್, ಕೃಷಿ, ನರ್ಸಿಂಗ್ ಇತರೆ ಕೋರ್ಸ್ ಆಪ್ಷನ್ ದಾಖಲಿಸುವ ಪ್ರಕ್ರಿಯೆ ಆರಂಭ

ಬೆಂಗಳೂರು: ಸಿಇಟಿ ಪರೀಕ್ಷೆ ಬರೆದ 3,09,014 ಅಭ್ಯರ್ಥಿಗಳ ಪೈಕಿ 2,92,782 ಅಭ್ಯರ್ಥಿಗಳಿಗೆ ರ್ಯಾಂಕ್ ನೀಡಲಾಗಿದೆ. ಸೀಟು ಹಂಚಿಕೆ ಪ್ರಕ್ರಿಯೆಗೆ ದತ್ತಾಂಶ ಸಿದ್ಧವಾಗಿದ್ದು, ಆಪ್ಷನ್ ದಾಖಲಿಸುವ ಪ್ರಕ್ರಿಯೆ ಜೂನ್ 10 ರಿಂದ ಆರಂಭವಾಗಲಿದೆ.

ನೀಟ್ ಮರು ಪರೀಕ್ಷೆ ಹಿನ್ನೆಲೆಯಲ್ಲಿ ಈ ಬಾರಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಲಾಗುವುದು. ಎಂಜಿನಿಯರಿಂಗ್, ಕೃಷಿ ವಿಜ್ಞಾನ, ನರ್ಸಿಂಗ್ ಸೇರಿದಂತೆ ಇತರೆ ಕೋರ್ಸುಗಳ ಸೀಟುಗಳಿಗೆ ಜೂನ್ 10 ರಿಂದ ಆಪ್ಷನ್ ಎಂಟ್ರಿಗೆ ಅವಕಾಶ ಕಲ್ಪಿಸಲಾಗುವುದು.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳಿಗೆ ನೀಟ್ ಫಲಿತಾಂಶ ಬಂದ ನಂತರ ಕೌನ್ಸೆಲಿಂಗ್ ನಡೆಸಲಾಗುವುದು. ನೀಟ್ ಮರು ಪರೀಕ್ಷೆ ಹಿನ್ನೆಲೆಯಲ್ಲಿ ಫಲಿತಾಂಶ ತಡವಾಗಲಿದೆ. ಅಲ್ಲಿಯವರೆಗೆ ಎಂಜಿನಿಯರಿಂಗ್ ಮತ್ತು ಇತರೆ ವಿಭಾಗಗಳ ಸೀಟು ಹಂಚಿಕೆ ಮಾಡದಿರಲು ಆಗುವುದಿಲ್ಲ. ಮೊದಲು ವೈದ್ಯಕೀಯ ಹೊರತುಪಡಿಸಿ ಉಳಿದೆಲ್ಲ ಕೋರ್ಸುಗಳ ಸೀಟು ಹಂಚಿಕೆಗೆ ಶೀಘ್ರವೇ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀಟ್ ಫಲಿತಾಂಶ ಮತ್ತು ರ್ಯಾಂಕ್ ಪಟ್ಟಿ ಲಭ್ಯವಾದ ನಂತರ ವೈದ್ಯಕೀಯ, ದಂತ ವೇದಿಕೆಯ ಕೋರ್ಸ್ ಗಳಿಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಲಾಗುವುದು. ಪ್ರತ್ಯೇಕ ಕೌನ್ಸೆಲಿಂಗ್ ನಡೆಸಿದರೂ ಕೂಡ ವೈದ್ಯಕೀಯ ಸೀಟು ಹಂಚಿಕೆ ನಂತರ ತೆರವಾಗುವ ಎಂಜಿನಿಯರಿಂಗ್ ಸೇರಿದಂತೆ ಇತರೆ ಕೋರ್ಸ್ ಗಳ ಸೀಟುಗಳನ್ನು ನಂತರದ ಸುತ್ತುಗಳಲ್ಲಿ ಒಳಪಡಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗುವುದು.

ಅದೇ ರೀತಿ ವೈದ್ಯಕೀಯ ಸೀಟುಗಳಿಗೆ ಸಂಬಂಧಿಸಿದಂತೆ ಮೊದಲನೇ ಸುತ್ತಿನಲ್ಲಿ ಅಖಿಲ ಭಾರತ ಕೋಟಾ ಮತ್ತು ಪ್ರಾಧಿಕಾರ ಎರಡೂ ಕಡೆ ಹಂಚಿಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಅಖಿಲ ಭಾರತ ಕೋಟಾದ ಸೀಟಿಗೆ ಪ್ರವೇಶ ಪಡೆಯಲು ಬಯಸಿದ್ದಲ್ಲಿ ಪ್ರಾಧಿಕಾರದಿಂದ ಹಂಚಿಕೆಯಾದ ಸೀಟ್ ಅನ್ನು ಬಿಟ್ಟುಕೊಡಲು ದಂಡ ಪಾವತಿಸಬೇಕಿಲ್ಲ.

ಅಲ್ಲದೆ ಇದೇ ಮೊದಲ ಬಾರಿಗೆ ಪ್ರೀ ಸುತ್ತಿನ ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಇಲ್ಲಿ ಹಂಚಿಕೆಯಾದ ಸೀಟು ಶೇಕಡ 100 ರಷ್ಟು ಇಷ್ಟ ಆಗುವ ಅಭ್ಯರ್ಥಿಗಳು ಕಾಲೇಜಿಗೆ ಸೇರಬಹುದು ಮತ್ತು ಮುಂದಿನ ಒಂದನೇ ಸುತ್ತಿನಲ್ಲಿ ಭಾಗವಹಿಸಬಹುದು ಎನ್ನುವ ಆಯ್ಕೆಯನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular