HomeBusinessBIG NEWS: ತೆರಿಗೆ ವಂಚನೆ ಪ್ರಕರಣದಲ್ಲಿ 'ಶೆಮೆರೂ' ಸಿಇಓ ಅರೆಸ್ಟ್

BIG NEWS: ತೆರಿಗೆ ವಂಚನೆ ಪ್ರಕರಣದಲ್ಲಿ ‘ಶೆಮೆರೂ’ ಸಿಇಓ ಅರೆಸ್ಟ್

ತೆರಿಗೆ ವಂಚನೆ ಪ್ರಕರಣದಲ್ಲಿ ಬಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ವಿಡಿಯೋ ಕಂಪನಿ ‘ಶೆಮೆರೂ’ ಕಾರ್ಯನಿರ್ವಾಹಕ ನಿರ್ದೇಶಕ ಹಿರೇನ್ ಗಡ ಅವರನ್ನು ಬಂಧಿಸಲಾಗಿದೆ.

ಯಾವುದೇ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ಹಾಗೂ ಸೇವೆಯನ್ನು ನೀಡದೆ ಶೆಲ್ ಕಂಪೆನಿಗಳ ಮುಖಾಂತರ ನಕಲಿ ಖಾತೆಗಳನ್ನು ಸೃಷ್ಟಿಸಿ ಸುಮಾರು 70.25 ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸಿರುವುದಾಗಿ ಹೇಳಲಾಗಿದೆ.

ಗುರುವಾರದಂದು ಹಿರೇನ್ ಅವರನ್ನು ಬಂಧಿಸಿದ ತೆರಿಗೆ ಇಲಾಖೆಯ ಅಧಿಕಾರಿಗಳು ಅವರನ್ನು ಮುಂಬೈ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ವೇಳೆ ಷರತ್ತುಬದ್ಧ ಜಾಮೀನು ನೀಡುವ ಮೂಲಕ ಬಿಡುಗಡೆಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular