ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿದೆ. ಡಿಸೆಂಬರ್ 29ರಂದು ‘ಕಾಟೇರ’ ಬಿಡುಗಡೆಯಾಗಲಿದೆ ಎಂದು ರಾಕ್ಲೈನ್ ವೆಂಕಟೇಶ್ ಘೋಷಣೆ ಮಾಡಿದ್ದಾರೆ. ಬೃಹತ್ ಸಂಭ್ರಮಾಚರಣೆಗೆ ಸಿದ್ಧರಾಗಿ, ‘ಕಾಟೇರ’ ಚಂಡಮಾರುತ ಡಿಸೆಂಬರ್ 29 ರಿಂದ ತನ್ನ ಹಾದಿಯಲ್ಲಿದೆ ಎಂದು ತಿಳಿಸಿದ್ದಾರೆ.
ಅಂದ ಹಾಗೆ, ಡಿಸೆಂಬರ್ ನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’, ಶಾರುಖ್ ನಟನೆಯ ‘ಡಂಕಿ’ ಬಿಡುಗಡೆಯಾಗಲಿದ್ದು, ಅದೇ ಹೊತ್ತಲ್ಲಿ ‘ಕಾಟೇರ’ ಚಂಡಮಾರುತ ಅಬ್ಬರ ಶುರುವಾಗಲಿದೆ.
Get ready for the MASSive celebration!! Look Up. Hold your guard. Brace for it. #Kaatera storm is on its way, from December 29th!🔥🤗@dasadarshan@TharunSudhir@RocklineEnt @AradhanaRam @harimonium @aanandaaudio#KaateraStormFromDec29 #KaateraTeaser #DBoss pic.twitter.com/HZj58XTiPc
— RocklineEnt (@RocklineEnt) November 29, 2023


