HomeCrimeCaught On CCTV: ಗೆಳೆಯನಿಂದಲೇ ಅಪ್ರಾಪ್ತೆಯ ಬರ್ಬರ ಹತ್ಯೆ; ಕಣ್ಣೆದುರೇ ಕೃತ್ಯ ನಡೆದ್ರೂ ಸುಮ್ಮನಿದ್ರು ಜನ

Caught On CCTV: ಗೆಳೆಯನಿಂದಲೇ ಅಪ್ರಾಪ್ತೆಯ ಬರ್ಬರ ಹತ್ಯೆ; ಕಣ್ಣೆದುರೇ ಕೃತ್ಯ ನಡೆದ್ರೂ ಸುಮ್ಮನಿದ್ರು ಜನ

ಅಪ್ರಾಪ್ತೆಯನ್ನ ಆಕೆಯ ಗೆಳೆಯನೇ ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿರೋ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದ್ದು ನಾಗರಿಕರನ್ನ ಬೆಚ್ಚಿಬೀಳಿಸಿದೆ. ಜನನಿಬಿಡ ಪ್ರದೇಶದಲ್ಲೇ ಬಾಲಕಿ ಮೇಲೆ ಹಲ್ಲೆಯಾಗ್ತಿದ್ರೂ ಯಾರೊಬ್ಬರೂ ತಡೆಯಲು ಮುಂದಾಗದೇ ಇರುವುದು ನಾಗರಿಕ ಸಮಾಜ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ.

ಘಟನೆಯ ದೃಶ್ಯ CC TV ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆರೋಪಿ 16 ವರ್ಷದ ಬಾಲಕಿಗೆ ಹಲವು ಬಾರಿ ಇರಿದಿದ್ದಾನೆ. ಕಲ್ಲಿನಿಂದ ಹೊಡೆಯಲಾಗಿದೆ. ಇದನ್ನ ಜನ ದಿಟ್ಟಿಸಿ ನೋಡುತ್ತಿದ್ದರೇ ಹೊರತು ಯಾರೂ ಕೂಡ ಗಲಾಟೆಯನ್ನ ತಡೆಯಲು ಮುಂದಾಗಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿನ್ನೆ ಉತ್ತರ ದೆಹಲಿಯ ರೋಹಿಣಿಯಲ್ಲಿ ಹಾಕಲಾಗಿದ್ದ ಭದ್ರತಾ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಇಂದು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಾಲಕಿಯ ಗೆಳೆಯ – ಆರೋಪಿ ಸಾಹಿಲ್‌ನನ್ನ ಬಂಧಿಸಲಾಗಿದೆ. ಇಬ್ಬರೂ ಹಿಂದಿನ ದಿನ ಜಗಳವಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಸಂಜೆ ಯುವಕ , ಬಾಲಕಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪದೇ ಪದೇ ಇರಿದಿದ್ದಾನೆ. ಒಂದು ಹಂತದಲ್ಲಿ ಚಾಕು ದೇಹಕ್ಕೆ ಸಿಕ್ಕಿಹಾಕಿಕೊಂಡಂತೆ ಕಂಡಿದ್ದು ಕೊಲೆಗಾರ ಅದನ್ನು ಸಡಿಲಗೊಳಿಸಲು ಹಿಡಿದು ಅಲುಗಾಡಿಸಿದ್ದಾನೆ.

ನಂತರ ಆತ ಕಲ್ಲಿನ ಚಪ್ಪಡಿ ಎತ್ತಿಕೊಂಡು ಆಕೆಗೆ ಪದೇ ಪದೇ ಹೊಡೆದಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಲಕಿ ತನ್ನ ಸ್ನೇಹಿತೆ ಹುಟ್ಟುಹಬ್ಬಕ್ಕೆ ತೆರಳುತ್ತಿದ್ದಾಗ ಆಕೆಯ ಮೇಲೆ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ದೆಹಲಿ ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular