HomeKarnatakaBREAKING NEWS: ಮೈಸೂರಲ್ಲಿ ಭೀಕರ ಅಪಘಾತ; 10 ಮಂದಿ ದಾರುಣ ಸಾವು

BREAKING NEWS: ಮೈಸೂರಲ್ಲಿ ಭೀಕರ ಅಪಘಾತ; 10 ಮಂದಿ ದಾರುಣ ಸಾವು

ಮೈಸೂರಿನ ಟಿ.ನರಸೀಪುರ- ಕೊಳ್ಳೆಗಾಲ ಮುಖ್ಯರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 10 ಮಂದಿ ಮೃತಪಟ್ಟಿದ್ದಾರೆ.

ಕುರುಬೂರು ಬಳಿ ಖಾಸಗಿ ಬಸ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಈ ಘೋರ ದುರಂತ ನಡೆದಿದೆ. ಇನ್ನೋವಾ ಕಾರಿನಲ್ಲಿದ್ದ 10 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಬಸ್ ಡಿಕ್ಕಿ ರಭಸಕ್ಕೆ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಅಪಘಾತದ ವೇಳೆ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದು ಗಾಯಗೊಂಡವರನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular