alex Certify Latest News | Kannada Dunia | Kannada News | Karnataka News | India News - Part 273
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ವಿದೇಶದಲ್ಲೂ ಇಂಟರ್ನ್ ಶಿಪ್ ಗೆ ಅವಕಾಶ ಕಲ್ಪಿಸಿದ ವಿಟಿಯು

ಬೆಂಗಳೂರು: ವಿಟಿಯು ವಿದ್ಯಾರ್ಥಿಗಳು ಇನ್ನು ಮುಂದೆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಇಂಟರ್ನ್ಶಿಪ್ ಮಾಡಬಹುದಾಗಿದೆ. ಈ ಮೊದಲು ವಿಟಿಯು ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಮಾತ್ರ ಇಂಟರ್ನ್ ಶಿಪ್ ಗೆ ಅವಕಾಶ Read more…

ರಾಮೇಶ್ವರಂ ಕೆಫೆ ಬಾಂಬ್ ‘ಸ್ಪೋಟ’ಕ ಮಾಹಿತಿ ಬಹಿರಂಗ: ಆರೋಪಿ ಮುಜಾಮಿಲ್ ಗೆ ಬಾಡಿಗೆ ಮನೆ ಕೊಡಿಸಿದ್ದು ಪೊಲೀಸ್ ಇನ್ ಸ್ಪೆಕ್ಟರ್

ಚಿಕ್ಕಮಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮುಜಾಮಿಲ್ ಗೆ ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ಬಾಡಿಗೆ ಮನೆ ಕೊಡಿಸಿದ್ದು ಪೊಲೀಸ್ ಇನ್ಸ್ಪೆಕ್ಟರ್ ಎನ್ನುವುದು ಗೊತ್ತಾಗಿದೆ. Read more…

ಸಂಸದೆ ಸುಮಲತಾ ಅಂಬರೀಶ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಡಿಸಿಎಂ ಡಿಕೆಶಿ ಮಹತ್ವದ ಹೇಳಿಕೆ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ನಿರಾಸೆಯಾಗಿದೆ. ಬಿಜೆಪಿ -ಜೆಡಿಎಸ್ ಮೈತ್ರಿ ಕಾರಣ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. Read more…

ನೈಸರ್ಗಿಕ ವಿಧಾನದಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ

ಸೌಂದರ್ಯ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧ. ಸೌದರ್ಯವರ್ದನೆಗೆ ಬ್ಯೂಟಿಪಾರ್ಲರ್ ಗೆ ಹೋಗದ ಹುಡುಗಿಯರಿಲ್ಲ. ದುಬಾರಿ ಹಣ ನೀಡಿ ಶೂನ್ಯ ಫಲಿತಾಂಶ ಪಡೆಯುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡೇ ಸೌಂದರ್ಯ Read more…

ವಿದ್ಯಾರ್ಥಿಗಳ 81 ಕೋಟಿ ರೂ. ಸ್ಟೈಫಂಡ್ ದುರ್ಬಳಕೆ: ಎಫ್ಐಆರ್ ದಾಖಲು

ಕಲಬುರಗಿ: ಕಲಬುರಗಿಯ ಹೈದರಾಬಾದ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ 81.21 ಕೋಟಿ ರೂ. ಸ್ಟೈಫಂಡ್  ದುರ್ಬಳಕೆ ಆರೋಪದಡಿ ಸಂಸ್ಥೆಯ ಮಾಜಿ ಅಧ್ಯಕ್ಷ ಸೇರಿ ನಾಲ್ವರ ವಿರುದ್ಧ ಸೈಬರ್ ಠಾಣೆಯಲ್ಲಿ ಭಾನುವಾರ Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ದರ ಭಾರಿ ಇಳಿಕೆ: 19 ಕೆಜಿ ವಾಣಿಜ್ಯ, 5 ಕೆಜಿ ಎಫ್‌ಟಿಎಲ್ ಸಿಲಿಂಡರ್ ದರ ಕಡಿತ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳು ಮತ್ತು 5 ಕೆಜಿ ಎಫ್‌ಟಿಎಲ್(ಫ್ರೀ ಟ್ರೇಡ್ ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿವೆ. 19 ಕೆ.ಜಿ ವಾಣಿಜ್ಯ Read more…

ಡಿಸಿಎಂ, ಸಚಿವರ ಕಚೇರಿಗಳಲ್ಲಿ ಚುನಾವಣಾ ರಾಜಕೀಯ ಚಟುವಟಿಕೆ: ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಲವು ಸಚಿವರು, ಶಾಸಕರು ಸರ್ಕಾರಿ ಕಚೇರಿಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ನಿಯೋಗದಿಂದ ಕೇಂದ್ರ Read more…

BIG NEWS: NIA ನೂತನ ಮುಖ್ಯಸ್ಥರಾಗಿ ಮುಂಬೈ ದಾಳಿ ವೇಳೆ ಉಗ್ರರ ಸದೆಬಡಿದಿದ್ದ ಸದಾನಂದ ಅಧಿಕಾರ ಸ್ವೀಕಾರ

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ನೂತನ ಮಹಾನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ಸದಾನಂದ ವಸಂತ್ ಡೇಟ್ ಭಾನುವಾರ ಅಧಿಕಾರ ಸ್ವೀಕರಿಸಿದರು. 2008 ರ ಮುಂಬೈ ದಾಳಿಯ ಸಮಯದಲ್ಲಿ ಭಯೋತ್ಪಾದಕರ ವಿರುದ್ಧ Read more…

ಕೋವಲಂ ಕಡಲ ಕಿನಾರೆಯ ಕಂಡಿರಾ….?

ಕೋವಲಂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೀಚ್ ಆಗಿದ್ದು, ಇಲ್ಲಿ ಮೂರು ಅರ್ಧ ಚಂದ್ರಾಕೃತಿಯ ಬೀಚ್‌ಗಳ ಸಮಾಗಮವಿದೆ. ಬೀಚ್ ಮೇಲೆ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ವಿಶಾಲವಾದ ಕಲ್ಲಿನ ಭೂಶಿರವು Read more…

ಸಣ್ಣ ಮಕ್ಕಳಿರುವ ಪೋಷಕರೇ ಗಮನಿಸಿ: ಆಟವಾಡುವಾಗಲೇ ದಾರುಣ ಘಟನೆ: ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು

ಶಿವಮೊಗ್ಗ: ನೀರು ತುಂಬಿದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಜೋಸೆಫ್ ನಗರ ಬಡಾವಣೆಯಲ್ಲಿ ಭಾನುವಾರ ನಡೆದಿದೆ. ಆಸಿಫ್ ಅವರ Read more…

CUET -UG ಅರ್ಜಿ ಸಲ್ಲಿಕೆ ದಿನಾಂಕ ಮತ್ತೆ ವಿಸ್ತರಣೆ

ನವದೆಹಲಿ: CUET -UG 2024 ನೋಂದಣಿಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಏಪ್ರಿಲ್ 5 ರವರೆಗೆ NTA ವಿಸ್ತರಿಸಿದೆ ಪದವಿಪೂರ್ವ ಕೋರ್ಸ್‌ಗಳಿಗೆ(CUET UG 2024) ಸಾಮಾನ್ಯ ವಿಶ್ವವಿದ್ಯಾನಿಲಯ Read more…

ಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನ: ರೆಪೊ ದರ ಯಥಾಸ್ಥಿತಿ ಸಾಧ್ಯತೆ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನಹರಿಸುವ ಉದ್ದೇಶದಿಂದ ಏಪ್ರಿಲ್ ನಲ್ಲಿಯೂ ರೆಪೊ ದರಗಳನ್ನು ಯಥಾಸ್ಥಿತಿ ಮುಂದುವರೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು Read more…

ಸೌಂದರ್ಯಕ್ಕೂ ಸಹಾಯಕ, ಆರೋಗ್ಯಕ್ಕೂ ಅದ್ಭುತ ʼಆಲಿವ್ ಆಯಿಲ್ʼ

ಅದ್ಭುತ ಆರೋಗ್ಯ ಮತ್ತು ತ್ವಚೆಯ ಪ್ರಯೋಜನಗಳೊಂದಿಗೆ ಆಲಿವ್ ಆಯಿಲ್ ಅತ್ಯಂತ ಪ್ರಸಿದ್ಧ ನೈಸರ್ಗಿಕ ಉತ್ಪನ್ನವಾಗಿದೆ. ನಮ್ಮ ಚರ್ಮದ ನೈಸರ್ಗಿಕ ಎಣ್ಣೆಗಳ ರಾಸಾಯನಿಕ ರಚನೆಯನ್ನು ಹೊಂದಿಸಲು ಆಲಿವ್ ಎಣ್ಣೆಯನ್ನು ಹತ್ತಿರದ Read more…

SHOCKING: ಕಾದ ಕಾವಲಿಯಂತಾದ ಕರ್ನಾಟಕ: 11 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ತೀವ್ರ ಏರಿಕೆಯಾಗುತ್ತಿದ್ದು, 11 ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಬಿಸಿ Read more…

ನಿಮ್ಮ ಮಗುವಿಗೆ ದಿನವೂ ʼಕ್ಯಾಂಡಿʼ ಕೊಡ್ತಿರಾ…? ಹಾಗಿದ್ರೆ ಇದನ್ನೊಮ್ಮೆ ಓದಿ

ಚಿಕ್ಕ ಮಕ್ಕಳಿಗೆ ಹುಳಿ ಹುಳಿ ಚಾಕಲೇಟ್ ಅಂದ್ರೆ ಇಷ್ಟ. ನೀವು ಕೂಡ ನಿಮ್ಮ ಮಗುವಿಗೆ ಈ ಹುಳಿ ಹುಳಿ ಕ್ಯಾಂಡಿಯನ್ನು ತಿನ್ನಲು ಕೊಡ್ತಿದ್ದೀರಾ? ಹಾಗಾದ್ರೆ ಇದನ್ನು ತಪ್ಪದೇ ಓದಿ. Read more…

ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶಿವಕುಮಾರ ಸ್ವಾಮೀಜಿಗಳ 117ನೇ ಜಯಂತಿ ಇಂದು

ತುಮಕೂರು: ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ ಮತ್ತು ಗುರುವಂದನಾ ಕಾರ್ಯಕ್ರಮ ಏಪ್ರಿಲ್ 1ರಂದು ಸಿದ್ಧಗಂಗಾ Read more…

ವಿದ್ಯುತ್ ಗ್ರಾಹಕರಿಗೆ ಸಿಹಿ ಸುದ್ದಿ: 15 ವರ್ಷದ ನಂತರ ಇದೇ ಮೊದಲ ಬಾರಿಗೆ ವಿದ್ಯುತ್ ದರ ಕಡಿತ: ಇಂದಿನಿಂದಲೇ ಆದೇಶ ಜಾರಿ

ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್ 1ರ ಸೋಮವಾರದಿಂದಲೇ ಆದೇಶ ಜಾರಿಯಾಗಲಿದೆ. 100 ಯೂನಿಟ್ ಗಿಂತ Read more…

ಅಪಾಯಕಾರಿ ಕಿಬ್ಬೊಟ್ಟೆ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ಉಪಾಯ

ಕಿಬ್ಬೊಟ್ಟೆಯ ಬೊಜ್ಜು ಅತ್ಯಂತ ಅಪಾಯಕಾರಿ ಕೊಬ್ಬಿನ ರೂಪಗಳಲ್ಲೊಂದು. ಕೆಲವೊಮ್ಮೆ ಬರಿಗಣ್ಣಿನಿಂದ ಗೋಚರವಾಗದ ಈ ಕೊಬ್ಬಿನಿಂದ ಚಯಾಪಚಯ ಅಸ್ವಸ್ಥತೆ, ಹೃದ್ರೋಗ, ಮಧುಮೇಹ ಹೀಗೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ತೆಳ್ಳಗಿರುವವರಲ್ಲೂ ಈ Read more…

ವೇತನ ಪಡೆಯುವ ನೌಕರರ ಗಮನಕ್ಕೆ: ಹೊಸ ಆದಾಯ ತೆರಿಗೆ ಪದ್ಧತಿಯಡಿಯಲ್ಲಿ ಈ ಕಡಿತ ಕ್ಲೈಮ್ ಮಾಡಬಹುದು

ನವದೆಹಲಿ: ಹೊಸ ಆದಾಯ ತೆರಿಗೆ ಪದ್ಧತಿ ಬಗ್ಗೆ ವೇತನ ಪಡೆಯುವ ನೌಕರರಿಗೆ ಮುಖ್ಯ ಮಾಹಿತಿ ಇಲ್ಲಿದೆ.  7 ಲಕ್ಷದವರೆಗಿನ ಆದಾಯದ ಮೇಲೆ ಶೂನ್ಯ ತೆರಿಗೆ ಹೊಣೆಗಾರಿಕೆಯನ್ನು ನೀಡುವ ಹೊಸ Read more…

ಚರ್ಮದ ಆರೈಕೆ ಮಾಡುವುದು ಹೇಗೆ….?

ಬಹುತೇಕ ಹೆಣ್ಮಕ್ಕಳಿಗೆ ಯಾವಾಗಲೂ ತಮ್ಮ ತ್ವಚೆಯದ್ದೇ ಚಿಂತೆ. ಹಲವಾರು ಮಂದಿ ಚಿಕ್ಕ-ಪುಟ್ಟ ಸಮಸ್ಯೆಗೂ ಪಾರ್ಲರ್ ಮೊರೆ ಹೋಗುವುದು ಸಾಮಾನ್ಯ. ಇದಕ್ಕಾಗಿ ದುಬಾರಿ ಮೊತ್ತ ತೆರುವುದಕ್ಕೂ ರೆಡಿ ಇರುತ್ತಾರೆ. ಇದರ Read more…

ಮುಖದ ತ್ವಚೆ ಕಾಂತಿಯುಕ್ತವಾಗಿ ಮಾಡುತ್ತದೆ ʼರೋಸ್ ವಾಟರ್ʼ

ರೋಸ್ ವಾಟರ್ ನೈಸರ್ಗಿಕ ಕ್ಲೆನ್ಸರ್ ಇದ್ದಂತೆ, ಚರ್ಮವನ್ನು ಸ್ವಚ್ಛಗೊಳಿಸೋದು ಮಾತ್ರವಲ್ಲ, ಕಾಂತಿಯುಕ್ತವಾಗಿ ಮಾಡುತ್ತದೆ. ರೋಸ್ ವಾಟರ್ ಬೌಲನ್ನು ಮೊದಲು ಫ್ರಿಡ್ಜ್ ನಲ್ಲಿಡಿ. ಯಾಕಂದ್ರೆ ತಣ್ಣಗಿದ್ದಷ್ಟು ತಾಜಾತನದಿಂದ ಕೂಡಿರುತ್ತದೆ, ಚರ್ಮವನ್ನು Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬೇಕೋ ಬೇಡವೋ….? ಗೊಂದಲಕ್ಕೆ ಇಲ್ಲಿದೆ ಪರಿಹಾರ

ನೀವು ಪ್ರತಿದಿನ ಸೇವಿಸುವ ಆಹಾರದಲ್ಲಿ ಬೆಳಗ್ಗೆ ತಿಂಡಿ ಅತ್ಯಂತ ಮುಖ್ಯವಾದದ್ದು. ಭರಪೂರ ಪೋಷಕಾಂಶಗಳಿಂದ ಕೂಡಿರೋ ತಿನಿಸನ್ನೇ ಬೆಳಗ್ಗೆ ತಿಂದರೆ ಸೂಕ್ತ. ಹಾಗಾಗಿ ಎಲ್ಲರೂ ಬ್ರೇಕ್ ಫಾಸ್ಟ್ ಗೆ ಬಾಳೆಹಣ್ಣನ್ನು Read more…

ಒತ್ತಡ ನಿವಾರಿಸಲು ಇದು ಬೆಸ್ಟ್‌ ಪ್ಲೇಸ್

ಅನೇಕ ಜನರು ಆರೋಗ್ಯದತ್ತ ಗಮನ ಹರಿಸುತ್ತಿದ್ದಾರೆ. ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಾಜಾತನವನ್ನು ಅನುಭವಿಸಲು ಹಲವರು ಪ್ರವಾಸ ಕೈಗೊಳ್ಳಲು ಇಷ್ಟಪಡುತ್ತಾರೆ. ಒತ್ತಡ ಮತ್ತು ನೋವನ್ನು ನಿವಾರಿಸಲು ಹಾಂಗ್ ಕಾಂಗ್‌ನ Read more…

ಬಿದಿರಿನ ಬಟ್ಟೆ ಧರಿಸಿ ಈ ಪ್ರಯೋಜನ ಪಡೆಯಿರಿ

ಇಂದಿನ ಫ್ಯಾಶನ್ ಯುಗದಲ್ಲಿ ನಮಗೆ ಹಲವು ವಿಧದ ಬಟ್ಟೆಗಳು ಲಭ್ಯವಾಗುತ್ತಿದೆ. ಇದರಲ್ಲಿ ಬಿದಿರಿನ ಬಟ್ಟೆ ಕೂಡ ಒಂದು. ಹತ್ತಿ ಬಟ್ಟೆಗೆ ಹೋಲಿಸಿದರೆ ಬಿದಿರಿನ ಬಟ್ಟೆ ಕೂಡ ಧರಿಸಲು ತುಂಬಾ Read more…

ನಿಮ್ಮ ʼಅಡುಗೆ ಕೋಣೆʼ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಗೊತ್ತಾ….?

ಮನೆ ಕಂಪ್ಲೀಟ್ ಆಗಬೇಕಿದ್ದರೆ ವಾಸ್ತು ಇರಲೇಬೇಕು. ವಾಸ್ತುಪ್ರಕಾರ ಮನೆ ಕಟ್ಟದೇ ಇದ್ದರೆ ಎಷ್ಟೇ ಐಷಾರಾಮಿಯಾಗಿ ಕಟ್ಟಿದ್ರೂ ಮುಂದೆ ತೊಂದರೆ ಎದುರಿಸಬೇಕಾದೀತು. ಹೀಗಾಗಿ ಬಹುತೇಕ ಎಲ್ಲರೂ ಮನೆಯ ಬ್ಲೂ ಪ್ರಿಂಟ್ Read more…

ಸ್ನೇಹಿತರೊಂದಿಗೆ ಈಜಲು ಹೋದಾಗಲೇ ಅವಘಡ: ನೀರಲ್ಲಿ ಮುಳುಗಿ ಯುವಕ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಶಂಭೂರು ಬಳಿ ನೇತ್ರಾವತಿ ನದಿಯಲ್ಲಿ ಮುಳುಗಿ ಯುವಕ ಮೃತಪಟ್ಟಿದ್ದಾರೆ. ಮೂವರು ಯುವಕರು ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಘಟನೆ Read more…

BREAKING: ಕೋಲಾರ ಬಳಿ ಸಿಎಂ ಸಿದ್ಧರಾಮಯ್ಯ ಪ್ರಯಾಣಿಸುತ್ತಿದ್ದ ಕಾರ್ ತಪಾಸಣೆ

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್ ಪ್ರಯಾಣಿಸುತ್ತಿದ್ದ ಕಾರ್ ತಪಾಸಣೆ ನಡೆಸಲಾಗಿದೆ ಕೋಲಾರದ ಗಡಿ ರಾಮಸಂದ್ರ ಬಳಿ ಮುಖ್ಯಮಂತ್ರಿಗಳು ತೆರಳುತ್ತಿದ್ದ ಕಾರ್ ತಪಾಸಣೆ ಮಾಡಲಾಗಿದೆ. ಲೋಕಸಭೆ ಚುನಾವಣೆ Read more…

ಶಾಲೆಯಲ್ಲೇ ಆಘಾತಕಾರಿ ಘಟನೆ: 3 ತಿಂಗಳಿಂದ ಬಾಲಕಿ ಮೇಲೆ ಪ್ಯೂನ್ ಅತ್ಯಾಚಾರ

ಮುಂಬೈ: ಕಳೆದ ಮೂರು ತಿಂಗಳಿಂದ ಎಂಟು ವರ್ಷದ ಬಾಲಕಿಯ ಮೇಲೆ ಶಾಲೆಯ ಆವರಣದಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈನ ಶಾಲೆಯೊಂದರ ಪ್ಯೂನ್‌ನನ್ನು ಶನಿವಾರ ಬಂಧಿಸಲಾಗಿದೆ. Read more…

BREAKING NEWS: ಅಸ್ಸಾಂನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: ಗುವಾಹಟಿ ವಿಮಾನ ನಿಲ್ದಾಣಕ್ಕೆ ಹಾನಿ

ಗುವಾಹಟಿ: ಭಾರೀ ಮಳೆಯಿಂದಾಗಿ ಗುವಾಹಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಲವು ಭಾಗಗಳು ಹಾನಿಗೊಳಗಾಗಿದ್ದು, ವಿಮಾನ ನಿಲ್ದಾಣದ ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಛಾವಣಿಗೆ ಹಾನಿಯಾಗಿ ನೀರು ಸೋರುತ್ತಿರುವುದು Read more…

ಕಾಂಪೌಂಡ್ ಕುಸಿದು ಮೂವರು ಕಾರ್ಮಿಕರು ಸಾವು

ಪುದುಚೇರಿ: ಇಲ್ಲಿಗೆ ಸಮೀಪದ ಹಳ್ಳಿಯೊಂದರಲ್ಲಿ ಕಾಲುವೆಯೊಂದರ ಹೂಳು ತೆಗೆಯುವ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರು ಚಾನೆಲ್ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಸಾವನ್ನಪ್ಪಿರುವ ಘಟನೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...