HomeBusinessBIG NEWS: ಗಿಫ್ಟ್, ಕ್ಯಾಶ್ ಬ್ಯಾಕ್ ವೋಚರ್ ಗಳಿಗೆ ಜಿಎಸ್‌ಟಿ ಇಲ್ಲ: ಹೈಕೋರ್ಟ್ ಮಹತ್ವದ ಆದೇಶ

BIG NEWS: ಗಿಫ್ಟ್, ಕ್ಯಾಶ್ ಬ್ಯಾಕ್ ವೋಚರ್ ಗಳಿಗೆ ಜಿಎಸ್‌ಟಿ ಇಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಗಿಫ್ಟ್, ಕ್ಯಾಶ್ ಬ್ಯಾಕ್ ವೋಚರ್ ಗಳು ಜಿಎಸ್​ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಗಿಫ್ಟ್ ಮತ್ತು ಕ್ಯಾಶ್ ಬ್ಯಾಕ್ ವೋಚರ್ ವ್ಯಾಪ್ತಿಗೆ ಬಾರದ ಕಾರಣ ವೋಚರ್ ಗಳ ವಿತರಣೆ ಮತ್ತು ಪೂರೈಕೆಗೆ ಜಿ.ಎಸ್.ಟಿ. ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ಕರ್ನಾಟಕ ಪೂರ್ವಭಾವಿ ನಿರ್ಣಯ ಪ್ರಾಧಿಕಾರ ವೋಚರ್ ಗಳಿಗೂ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಪ್ರೀಮಿಯರ್ ಸೇಲ್ಸ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಗಿಫ್ಟ್, ಕ್ಯಾಶ್ ಬ್ಯಾಕ್ ವೋಚರ್ ಗಳಿಗೆ ಜಿ.ಎಸ್.ಟಿ. ಅನ್ವಯಿಸಲ್ಲ ಎಂದು ಆದೇಶ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಿಫ್ಟ್, ಕ್ಯಾಶ್ ಬ್ಯಾಕ್, ಇ-ವೋಚರ್ ಗಳು ವಿತರಣೆ ಮತ್ತು ಪೂರೈಕೆಯನ್ನು ಪರಿಗಣಿಸುವ ಸಾಧನವಷ್ಟೇ ಆಗಿರುತ್ತದೆ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿ ವೋಚರ್ ಗಳು ಹಣದ ವ್ಯಾಖ್ಯಾನದಲ್ಲಿ ಬರಲಿದ್ದು, ಅವುಗಳನ್ನು ಜಿಎಸ್ಟಿ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ವೋಚರ್ ಗಳ ವಿತರಣೆ ಮತ್ತು ಪೂರೈಕೆಯು ಪೂರ್ವ ಪಾವತಿಗೆ ಸಮನಾಗಿರುತ್ತದೆ. ಅದು ಸರಕು ಮತ್ತು ಸೇವೆಯ ಪೂರೈಕೆ ಆಗುವುದಿಲ್ಲ. ಹಾಗಾಗಿ ಜಿ.ಎಸ್.ಟಿ. ಅನ್ವಯವಾಗಲ್ಲ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular