ದಾವಣಗೆರೆ: ಜಾತಿ ನಿಂದನೆ ಆರೋಪದ ಮೇಲೆ ಶಾಸಕ ಬಿ.ಪಿ. ಹರೀಶ್, ಅವರ ಪುತ್ರ ಮತ್ತು ಆಪ್ತ ಸಹಾಯಕನ ವಿರುದ್ಧ ಕೇಸ್ ದಾಖಲಾಗಿದೆ.
ಕೆರೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸುವಾಗ ಶಾಸಕ ಬಿ.ಪಿ. ಹರೀಶ್ ರಸ್ತೆ ಅಡ್ಡಗಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಶಾಸಕರು, ಅವರ ಪುತ್ರ ಮತ್ತು ಆಪ್ತ ಸಹಾಯಕ ಅವಹೇಳನ, ಜಾತಿನಿಂದನೆ ಮಾಡಿದ್ದಾರೆ ಎಂದು ದಾವಣಗೆರೆ ತಾಲೂಕಿನ ಕಾಡಜ್ಜಿ ಗ್ರಾಮದ ರೈತ ದಾವಣಗೆರೆಯಲ್ಲಿ ಕೇಸು ದಾಖಲಿಸಿದ್ದಾರೆ.
ರೈತ ಹೆಚ್. ಕಾಂತರಾಜು ದೂರು ನೀಡಿದ್ದಾರೆ. ತಮ್ಮನ್ನು ಶಾಸಕ ಹರೀಶ್ ಮತ್ತು ಅವರ ಪುತ್ರ ಹಾಗೂ ಆಪ್ತ ಸಹಾಯಕ ಜನವರಿ 12ರಂದು ಕೆರೆ ಅಂಗಳದಲ್ಲಿ ಕಾರು ಅಡ್ಡಗಟ್ಟಿ ನಿಲ್ಲಿಸಿ ಕೆರೆಯ ಮಣ್ಣನ್ನು ಯಾರನ್ನು ಕೇಳಿ ತುಂಬಿಕೊಂಡು ಹೋಗುತ್ತಿದ್ದೀಯಲೇ ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ಅವಾಚ್ಯವಾಗಿ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

