HomeBeautyಸೌಂದರ್ಯ ವೃದ್ಧಿಸುವಲ್ಲಿ ಸಹಾಯಕ 'ಏಲಕ್ಕಿ'.....!

ಸೌಂದರ್ಯ ವೃದ್ಧಿಸುವಲ್ಲಿ ಸಹಾಯಕ ‘ಏಲಕ್ಕಿ’…..!

ಪಾಯಸಕ್ಕೆ ಪರಿಮಳ ಬೀರಲು ಬಳಸುವ, ವಾಕರಿಕೆ ಬಂದಾಗ ಬಾಯಿಯಲ್ಲೇ ಇಟ್ಟುಕೊಂಡು ಜಗಿಯುವ ಏಲಕ್ಕಿಯಿಂದ ಮುಖದ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ?

ಏಲಕ್ಕಿ ನಿಮ್ಮ ಮುಖದಲ್ಲಿ ಮೂಡುವ ಸಣ್ಣ ಸಣ್ಣ ಗುಳ್ಳೆಗಳನ್ನು ದೂರ ಮಾಡುತ್ತದೆ. ಅಲರ್ಜಿಗೆ ಅತ್ಯುತ್ತಮ ಮದ್ದಾಗಬಲ್ಲ ಏಲಕ್ಕಿ ನಿಮ್ಮ ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ.

ಏಲಕ್ಕಿಯನ್ನು ಪುಡಿ ಮಾಡಿ ಚಿಟಿಕೆ ಅರಶಿನ ಬೆರೆಸಿ ಕೆನೆಭರಿತ ದಪ್ಪನೆಯ ಹಾಲಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ಮುಖ ತೊಳೆಯುವುದರಿಂದ ನಿಮ್ಮ ತ್ವಚೆ ಹೊಳಪು ಪಡೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಲಕ್ಕಿಯಲ್ಲಿರುವ ವಿಟಮಿನ್ ಸಿ ದೇಹದ ರಕ್ತ ಪರಿಚಲನೆಗೆ ವೇಗ ಕೊಟ್ಟು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಏಲಕ್ಕಿ ಪುಡಿಗೆ ಜೇನುತುಪ್ಪ ಬೆರೆಸಿ ಹಚ್ಚಿಕೊಂಡರೆ ಇದು ಸ್ಕ್ರಬ್ ರೀತಿಯ ಪರಿಣಾಮ ಬೀರುತ್ತದೆ. ಹತ್ತು ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ತೆಗೆಯಿರಿ.

ಏಲಕ್ಕಿ ಪುಡಿಗೆ ಶ್ರೀಗಂಧ ಬೆರೆಸಿಯೂ ಇದೇ ರೀತಿಯ ಫೇಸ್ ಮಾಸ್ಕ್ ತಯಾರಿಸಬಹುಸು. ಏಲಕ್ಕಿ ಎಣ್ಣೆಯನ್ನು ರಾತ್ರಿ ಮುಖಕ್ಕೆ ಹಚ್ಚಿ ಬೆಳಗ್ಗೆ ತೊಳೆಯುವುದರಿಂದ ಮುಖದ ಕೊಳಕು ದೂರವಾಗಿ ಮುಖ ಸ್ವಚ್ಛವಾಗುತ್ತದೆ. ಇದನ್ನು ಎಣ್ಣೆ ತ್ವಚೆ ಹೊಂದಿರುವವರು ಹೆಚ್ಚು ಬಳಸುವುದು ಒಳ್ಳೆಯದಲ್ಲ.

For Latest News Updates, Join Our Whatsapp Community🚩
RELATED ARTICLES

Most Popular