HomeLatest NewsBIG NEWS: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬಂಡೆ: ಮಹಿಳೆ ಸ್ಥಳದಲ್ಲಿಯೇ ಸಾವು: ಪತಿ-ಮಗ ಪಾರು

BIG NEWS: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬಂಡೆ: ಮಹಿಳೆ ಸ್ಥಳದಲ್ಲಿಯೇ ಸಾವು: ಪತಿ-ಮಗ ಪಾರು

ರಾಯಗಢ: ಚಲಿಸುತ್ತಿದ ಕಾರಿನ ಮೇಲೆ ಬೃಹತ್ ಬಂಡೆ ಉರುಳಿಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, ಪತಿ ಹಾಗೂ ಮಗ ಪಾರಾಗಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಕೊಂಡಿಥರ್ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ತುಮ್ಹಿನಿ ಘಟ್ ಬಳಿ ಈ ದುರಂತ ಸಂಭವಿಸಿದೆ. ಪುಣೆ ನಿವಾಸಿ ಸ್ನೇಹಲ್ (43) ಮೃತ ಮಹಿಳೆ. ಪತಿ ಹಾಗೂ ಮಗನೊಂದಿಗೆ ಪುಣೆಯಿಂದ ಮಂಗಾವ್ ಗೆ ಪ್ರಯಾಣಿಸುತ್ತಿದ್ದರು. ಸ್ನೇಹಲ್ ಕಾರಿನ ಮುಂದಿನ ಸೀಟ್ ನಲ್ಲಿ ಕುಳಿತಿದ್ದರು.

ಘಾಟ್ ರಸ್ತೆಯಲ್ಲಿ ಕಾರ್ನ ಮೇಲೆ ಬೃಹತ್ ಬಂಡೆ ಉರುಳಿ ಬಿದ್ದಿದೆ. ಕಾರಿನ ಸನ್ ರೂಫ್ ಮುರಿದು ಮಹಿಳೆಯ ಮೇಲೆ ಬಿದ್ದಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular