HomeLatest NewsBREAKING : DCM ಡಿ.ಕೆ ಶಿವಕುಮಾರ್ ನಿವಾಸದ ಬಳಿ ನಿಲ್ಲಿಸಿದ ಕಾರು ಜಪ್ತಿ, ನಕಲಿ 'ನಂಬರ್...

BREAKING : DCM ಡಿ.ಕೆ ಶಿವಕುಮಾರ್ ನಿವಾಸದ ಬಳಿ ನಿಲ್ಲಿಸಿದ ಕಾರು ಜಪ್ತಿ, ನಕಲಿ ‘ನಂಬರ್ ಪ್ಲೇಟ್’ ಹಾಕಿಸಿ ಕಳ್ಳಾಟ.!

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿ ನಿಲ್ಲಿಸಿದ ಕಾರನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು,ಒಂದೇ ಕಾರಿಗೆ 2 ನಂಬರ್ ಪ್ಲೇಟ್ ಹಾಕಿಸಿ ಕಳ್ಳಾಟ ನಡೆಸಿರುವುದು ಬಯಲಾಗಿದೆ.

ಹೌದು. ಡಿಕೆಶಿ ಅವರ ಸದಾಶಿವನಗರದ ನಿವಾಸದ ಸಮೀಪ ನಿಲ್ಲಿಸಿದ್ದ ಐಷಾರಾಮಿ ಫಾರ್ಚೂನರ್ ಕಾರನ್ನು ಪೊಲೀಸರು ಸೀಜ್ ಮಾಡಿಕೊಂಡಿದ್ದಾರೆ. ಕಾರು ಜಪ್ತಿ ಮಾಡಿ 5 ದಿನ ಕಳೆದರೂ ಕೂಡ ಯಾರೊಬ್ಬರು ಕಾರು ತಮ್ಮದು ಎಂದು ಪೊಲೀಸರ ಮುಂದೆ ಬಂದಿಲ್ಲ.

ಕೆಎ 42 –ಪಿ-6606 ನಂಬರ್ ಕಾರನ್ನು ರಾಮನಗರದ ಆರ್ ಟಿ ಒ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದೆ. ಎ ಮಂಜುನಾಥ್ ಎಂಬುವವರ ಹೆಸರಿನಲ್ಲಿ ಕಾರು ರಿಜಿಸ್ಟರ್ ಆಗಿದೆ. ಇಎಮ್ ಐ ಕಟ್ಟಿಲ್ಲವೆಂದು ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಆದ್ದರಿಂದ ಮಂಜುನಾಥ್ ಗೆ ನೋಟಿಸ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಪ್ತಿ ಮಾಡಿರುವ ಕಾರಿನ ಅಸಲಿ ನಂಬರ್ ಪ್ಲೇಟ್ ಕೆಎ 42-ಪಿ-6606 ಮರೆಮಾಚಿ ಅದರ ಬದಲಿಗೆ KA 51 MW 6814 ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಒಂದೇ ಕಾರಿಗೆ 2 ನಂಬರ್ ಪ್ಲೇಟ್ ಅಳವಡಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೆ.7 ರಂದು ಡಿಸಿಎಂ ಡಿಕೆಶಿ ನಿವಾಸದ ಸಮೀಪ ಈ ಕಾರು ಹಲವು ಗಂಟೆಗಳ ಕಾಲ ಅಲ್ಲೇ ನಿಂತಿತ್ತು. ನಂತರ ಯಾರೂ ಕಾರಿನ ಹತ್ತಿರ ಬಾರದ ಹಿನ್ನೆಲೆ ಸಂಚಾರಿ ಪೊಲೀಸರು ಕಾರು ತೆರವು ಮಾಡಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular