ಬೆಂಗಳೂರು: ವ್ಯಕ್ತಿಯೋರ್ವ ಕಾರಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಡಿಗೆಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ.
ಮುತ್ಯಾಲ ನಗರದ ನಿವಾಸಿ ಅಶ್ವಿನ್ ಕುಮಾರ್ (47) ಮೃತ ವ್ಯಕ್ತಿ. ಕೊಡಿಗೆಹಳ್ಳಿ ಬ್ರಿಡ್ಜ್ ಬಳಿ ಖಾಸಗಿ ಆಸ್ಪತ್ರೆಯ ಮುಂಭಾಗ ಕಾರಿನಲ್ಲಿಯೇ ವ್ಯಕ್ತಿ ಶವವಾಗಿದ್ದಾರೆ.
ಮನೆಯಿಂದ ಹೊರಹೋಗಿದ್ದ ಅಶ್ವಿನ್ ಎಷ್ಟು ಹೊತ್ತಾದರೂ ವಾಪಾಸ್ ಆಗಿಲ್ಲ. ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಲೊಕೇಷನ್ ಟ್ರ್ಯಾಕ್ ಮಾಡಿ ಕಾರು ಇರುವ ಸ್ಥಳಕ್ಕೆ ಬಂದು ಕಾರಿನ ಬಾಗಿಲು ತೆಗೆದು ನೋಡಿದಾಗ ಅಶ್ವಿನ್ ಶವವಾಗಿ ಪತ್ತೆಯಾಗಿದ್ದಾರೆ. ಅಶ್ವಿನ್ ಕುಮಾರ್ ಕೈ ಮೇಲೆ ಸುಟ್ಟಗಾಯಗಳಿವೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಕೊಡಿಗೆಹಳ್ಳಿ ಪೊಲೀಸರು ಹಾಗೂ ಎಫ್ ಎಸ್ ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.