ಜೀಬ್ರಾ ಕ್ರಾಸಿಂಗ್ನಲ್ಲಿ ನಿಲ್ಲಿಸಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಭೀಕರ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ರೆಡ್ಡಿಟ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಈ ಭೀಕರ ದೃಶ್ಯಾವಳಿಯು ಸೆರೆಯಾಗಿದೆ. ವಿಡಿಯೋದಲ್ಲಿ ಝೀಬ್ರಾ ಕ್ರಾಸಿಂಗ್ನಲ್ಲಿ ಕಾರು ನಿಂತಿರೋದನ್ನ ಕಾಣಬಹುದಾಗಿದೆ. ಹಿಂದೆಯೇ ಒಂದು ಟ್ರಕ್ ಹಾಗೂ ಬಸ್ ಬರುತ್ತಿರೋದನ್ನು ಕಾಣಬಹುದಾಗಿದೆ. ಟ್ರಕ್ ನಿಂತ ಬಳಿಕ ಹಿಂಬದಿಯಿಂದ ಬಸ್ ಟ್ರಕ್ನ್ನು ಗುದ್ದಿದೆ. ಪರಿಣಾಮ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ.
ಟ್ರಕ್ ಕಾರಿಗೆ ಡಿಕ್ಕಿದ ರಭಸಕ್ಕೆ ಕಾರು ಯರ್ರಾಬಿರ್ರಿ ಚಲಿಸಲು ಆರಂಭಿಸಿದೆ. ಹೇಗೋ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ಝೀಬ್ರಾ ಲೈನ್ನಲ್ಲಿ ಕಾರು ನಿಲ್ಲಿಸಿದ್ರೆ ಅದರ ಪರಿಣಾಮ ಹೀಗಿರುತ್ತೆ ನೋಡಿ ಅಂತಾ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಇದೇ ಕಾರಣಕ್ಕಾಗಿಯೇ ನಾನು ಸಿಗ್ನಲ್ ಲೈಟ್ ಹಳದಿ ಬಣ್ಣದಲ್ಲಿದ್ದಾಗ ಕಾರು ನಿಲ್ಲಿಸಲು ಹೆದರುತ್ತೇನೆ. ಯಾವ ಚಾಲಕ ಧಾವಿಸಿ ಬಂದು ನಮ್ಮ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾನೋ ಎಂಬುದೇ ಅರ್ಥವಾಗೋದಿಲ್ಲ ಎಂದು ರೆಡಿಟ್ ಬಳಕೆದಾರರು ಬರೆದುಕೊಂಡಿದ್ದಾರೆ.
Car driver stopped at a zebra line and this was the result
byu/pluto_N inCarsIndia