ಕತ್ತೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭ್ಯರ್ಥಿಗಳು ಪ್ರಕ್ರಿಯೆ ಪೂರ್ಣಗೊಳಿಸಲು ಹರಸಾಹಸ ಪಡುತ್ತಿದ್ದಾರೆ.

ಕೆಲವು ಅಭ್ಯರ್ಥಿಗಳು ನಾಮನಿರ್ದೇಶನ ಕೇಂದ್ರಗಳಿಗೆ ಆಗಮಿಸಲು ಅಸಾಂಪ್ರದಾಯಿಕ ಸಾರಿಗೆ ವಿಧಾನಗಳನ್ನು ಆರಿಸಿಕೊಂಡು ಗಮನಸೆಳೆದಿದ್ದಾರೆ. ಬುರ್ಹಾನ್‌ ಪುರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಿಯಾಂಕ್ ಠಾಕೂರ್ ನಾಮಪತ್ರ ಸಲ್ಲಿಸಲು ಕತ್ತೆಯ ಮೇಲೆ ಚುನಾವಣಾ ಕಚೇರಿಗೆ ಆಗಮಿಸಿದ್ದಾರೆ.

ಕತ್ತೆಯ ಮೇಲೆ ಸವಾರಿ ಮಾಡಲು ಕಾರಣಗಳನ್ನು ವಿವರಿಸಿದ ಠಾಕೂರ್, ಎಲ್ಲಾ ರಾಜಕೀಯ ಪಕ್ಷಗಳು ಸ್ವಜನಪಕ್ಷಪಾತದ ಬಲಿಪಶುಗಳು ಮತ್ತು ಸಾರ್ವಜನಿಕರನ್ನು ಕತ್ತೆಗಳಾಗಿ ಪರಿವರ್ತಿಸುತ್ತಿವೆ(ಜನರನ್ನು ಮೂರ್ಖರನ್ನಾಗಿಸುತ್ತಿವೆ) ಆದ್ದರಿಂದ, ನಾನು ಕತ್ತೆಯ ಮೇಲೆ ಸವಾರಿ ಮಾಡಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಬುರ್ಹಾನ್‌ಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಠಾಕೂರ್ ಸುರೇಂದ್ರ ಸಿಂಗ್ ಶೇರಾ ಭಯ್ಯಾ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಅವರು ತಮ್ಮ ಕೆಲವು ಬೆಂಬಲಿಗರೊಂದಿಗೆ ಎತ್ತಿನ ಬಂಡಿಯಲ್ಲಿ ಆಗಮಿಸಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಜನಸಾಮಾನ್ಯರು ಭರಿಸಲಾಗದಷ್ಟು ಹೆಚ್ಚಿಸಲಾಗಿದೆ, ಹೀಗಾಗಿ ನಾವು ಎತ್ತಿನ ಬಂಡಿಯಲ್ಲಿ ಇಲ್ಲಿಗೆ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ಸಾನ್ವೆರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೀನಾ ಬೋರಸಿ ಅವರು ಸಾನ್ವೆರ್ ತಹಸಿಲ್ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಅವರು ಟ್ರ್ಯಾಕ್ಟರ್‌ನಲ್ಲಿ ಚುನಾವಣಾ ಕಚೇರಿಗೆ ಆಗಮಿಸಿದ್ದರು.

ಬಿಜೆಪಿ ಅಭ್ಯರ್ಥಿ ಮತ್ತು ಸಚಿವ ವಿಶ್ವಾಸ್ ಸಾರಂಗ್ ಅವರು ನರೇಲಾ ವಿಧಾನಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸ್ಕೂಟರ್‌ನಲ್ಲಿ ಆಗಮಿಸಿದರು.

ಮಧ್ಯಪ್ರದೇಶದಲ್ಲಿ ನಾಮಪತ್ರ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನಾಂಕವಾಗಿದ್ದು, ಅಕ್ಟೋಬರ್ 31 ರಂದು ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನವೆಂಬರ್ 2 ಕೊನೆಯ ದಿನಾಂಕವಾಗಿದೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17 ರಂದು ಚುನಾವಣೆ ನಿಗದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read