ಹುಟ್ಟುಹಬ್ಬಕ್ಕೆ ಅಜ್ಜ ಕೊಟ್ಟ ಸಲಹೆಯಿಂದ 290 ಕೋಟಿ ರೂ. ಒಡತಿಯಾದ 18ರ ಯುವತಿ….!

ಶ್ರೀಮಂತ ಕುಟುಂಬಗಳಿಗೆ ಸೇರಿದವರ ಹೊರತು ಸಾಮಾನ್ಯ ಜನರು ದುಬಾರಿ ಉಡುಗೊರೆಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ರಾಯೋಗಿಕ ಜಗತ್ತಿನಲ್ಲಿ ಇದು ಸಂಪೂರ್ಣವಾಗಿ ನಿಜ. ಆದರೆ ಕೆಲವೊಮ್ಮೆ ಅದೃಷ್ಟವು ಯಾರನ್ನಾದರೂ ಹುಡುಕಿಕೊಂಡು ಬರುತ್ತದೆ. 18 ವರ್ಷದ ಯುವತಿಗೆ ಆದದ್ದು ಇದೇ. ತನ್ನ 18 ನೇ ಹುಟ್ಟುಹಬ್ಬದಂದು ಈಕೆ ಪಡೆದ ಉಡುಗೊರೆ ಅವಳ ಮತ್ತು ಅವಳ ಕುಟುಂಬದ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು ಅದೀಗ ವೈರಲ್​ ಆಗಿದೆ.

ಜೂಲಿಯೆಟ್ ಲಾಮರ್ ಎಂಬ ಯುವತಿಯು ಜನವರಿ 7 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಳು. ಅವಳು ಕೆನಡಾದ ಒಂಟಾರಿಯೊ ನಿವಾಸಿ. ತನ್ನ 18 ನೇ ಹುಟ್ಟುಹಬ್ಬದಂದು, ಜೂಲಿಯೆಟ್ ಸ್ವಲ್ಪ ಮೋಜಿನ ಮನಸ್ಥಿತಿಯಲ್ಲಿದ್ದಳು. ಆಗ ಅವಳ ಅಜ್ಜ ಏನೋ ಸಲಹೆ ಕೊಟ್ಟರು. ಆದರೆ ಈ ಸಲಹೆಯು ಅವರ ಇಡೀ ಜೀವನವನ್ನು ಬದಲಾಯಿಸುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ.

ಜೂಲಿಯೆಟ್ ತನ್ನ ವಿಶೇಷ ದಿನಕ್ಕಾಗಿ ಏನನ್ನಾದರೂ ಖರೀದಿಸಲು ಸೂಪರ್‌ಸ್ಟೋರ್‌ಗೆ ಹೋಗುತ್ತಾಳೆ. ಆದರೆ ಏನನ್ನು ಕೊಳ್ಳಬೇಕೆಂದು ಆಕೆಗೆ ಅರ್ಥವಾಗಲಿಲ್ಲ. ಆಗ ಅವಳ ಅಜ್ಜ ಲಾಟರಿ ಟಿಕೆಟ್ ಖರೀದಿಸಲು ಸಲಹೆ ನೀಡಿದರು. ತನ್ನ ಜೀವನದಲ್ಲಿ ಮೊದಲ ಬಾರಿಗೆ, ಅವಳು ಒಂದನ್ನು ಖರೀದಿಸಿದಳು. ಈ ಟಿಕೆಟ್‌ಗಳನ್ನು ಹೇಗೆ ಖರೀದಿಸಬೇಕು ಎಂದು ಜೂಲಿಯೆಟ್‌ಗೆ ತಿಳಿದಿರಲಿಲ್ಲ. ಹಾಗಾಗಿ ತಂದೆಗೆ ಕರೆ ಮಾಡಿ ವಿಚಾರಿಸಿದಳು. ನಂತರ ಯುವತಿ ಒಂಟಾರಿಯೊ ಲಾಟರಿ ಮತ್ತು ಗೇಮಿಂಗ್ ಕಾರ್ಪೊರೇಶನ್‌ಗೆ ಹೋಗಿ ಲಾಟರಿ ಟಿಕೆಟ್ ಖರೀದಿಸಿದಳು. ಅವಳು ಲೊಟ್ಟೊ 6-49 ಲಾಟರಿ ಖರೀದಿಸಿ ಮನೆಗೆ ಮರಳಿದಳು.

ನಂತರ ನೋಡಿದರೆ ಆಕೆ 48 ಮಿಲಿಯನ್ ಕೆನಡಿಯನ್ ಡಾಲರ್ ಅಂದರೆ 2.9 ಬಿಲಿಯನ್ ಮೊತ್ತವನ್ನು ಗೆದ್ದಿದ್ದಾಳೆ ಎಂದು ತಿಳಿಯಿತು. ನೋಡಿ ಯುವತಿ ಆಘಾತಕ್ಕೊಳಗಾದಳು. ನಂತರ ಜೂಲಿಯೆಟ್ ಜೀವನ ಬದಲಾಯಿತು ಎಂದು ಬರೆದುಕೊಂಡಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read