HomeSportsಟಿ20 ವಿಶ್ವಕಪ್ ಸಮರ: ಇಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಕೆನಡಾ ಮುಖಾಮುಖಿ: ಹರಿಣಗಳಿಗೆ...

ಟಿ20 ವಿಶ್ವಕಪ್ ಸಮರ: ಇಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಕೆನಡಾ ಮುಖಾಮುಖಿ: ಹರಿಣಗಳಿಗೆ ಕಂಟಕವಾಗಲಿದೆಯೇ ಕೆನಡಾ?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಬೀಗುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆನಡಾ ವಿರುದ್ಧ ಸೆಣಸುವ ಮೂಲಕ ತನ್ನ ಟಿ20 ವಿಶ್ವಕಪ್ 2026ರ ಅಭಿಯಾನವನ್ನು ಆರಂಭಿಸಲಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ಏಡನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

2024ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಅನುಭವಿಸಿದ ಸೋಲಿನ ಕಹಿ ನೆನಪನ್ನು ಮರೆತು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಹರಿಣಗಳ ಪಡೆ ಸಜ್ಜಾಗಿದೆ. ತಂಡದ ಪ್ರಮುಖ ಆಟಗಾರ ಡೇವಿಡ್ ಮಿಲ್ಲರ್ ಸಂಪೂರ್ಣ ಫಿಟ್ ಆಗಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ತಂಡದ 15 ಸದಸ್ಯರ ಪೈಕಿ 9 ಮಂದಿ ಹಳೆಯ ಆಟಗಾರರೇ ಇರುವುದು ತಂಡದ ಬಲಕ್ಕೆ ಕಾರಣವಾಗಿದೆ. ನಾಯಕ ಮಾರ್ಕ್ರಾಮ್ ಪ್ರಕಾರ, ಮಿಲ್ಲರ್ ಅವರ ಲಯ ಮತ್ತು ಆತ್ಮವಿಶ್ವಾಸ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.

ಮತ್ತೊಂದೆಡೆ, ಕೆನಡಾ ತಂಡವು ದಿಲ್‌ಪ್ರೀತ್ ಬಾಜ್ವಾ ಅವರ ನಾಯಕತ್ವದಲ್ಲಿ ಹೊಸ ರೂಪದಲ್ಲಿ ಕಣಕ್ಕಿಳಿಯುತ್ತಿದೆ. ಕಳೆದ ಐದು ಅಧಿಕೃತ ಟಿ20 ಪಂದ್ಯಗಳಲ್ಲಿ ಸತತ ಜಯ ಸಾಧಿಸಿರುವ ಕೆನಡಾವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಸಾದ್ ಬಿನ್ ಜಾಫರ್ ಮತ್ತು ನವನೀತ್ ಧಲಿವಾಲ್ ಅವರಂತಹ ಅನುಭವಿ ಆಟಗಾರರು ತಂಡದಲ್ಲಿದ್ದು, ದಕ್ಷಿಣ ಆಫ್ರಿಕಾಕ್ಕೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಗ್ರೂಪ್-ಡಿ ಹಂತದ ಈ ಪಂದ್ಯವು ಕುತೂಹಲ ಕೆರಳಿಸಿದ್ದು, ಎರಡು ತಂಡಗಳಿಗೂ ಶುಭಾರಂಭ ಮಾಡುವುದು ಅನಿವಾರ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಭಾವ್ಯ ಆಟಗಾರರ ಪಟ್ಟಿ: ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಏಡನ್ ಮಾರ್ಕ್ರಾಮ್ (ನಾಯಕ), ರಿಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್/ಜೇಸನ್ ಸ್ಮಿತ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನೋಕಿಯಾ, ಲುಂಗಿ ಎನ್ಗಿಡಿ.

ಕೆನಡಾ: ದಿಲ್ಪ್ರೀತ್ ಬಾಜ್ವಾ (ನಾಯಕ), ಯುವರಾಜ್ ಸಾಮ್ರಾ, ನವನೀತ್ ಧಲಿವಾಲ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವ, ಕನ್ವರ್ಪಾಲ್ ತತ್ಗೂರ್, ಜಸ್ಕರನ್ ಸಿಂಗ್, ಸಾದ್ ಬಿನ್ ಜಾಫರ್, ಶಿವಂ ಶರ್ಮಾ, ಡಿಲನ್ ಹೈಲಿಗರ್, ಕಲೀಮ್ ಸನಾ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular