ಬಳ್ಳಾರಿ : ನಗರದ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೆಂಗಳೂರಿನ ನರಸಾಪುರದ ಹೋಂಡಾ ಮೋಟಾರ್ ಸೈಕಲ್ ಕಂಪನಿಯಲ್ಲಿ ಅಪ್ರೆಂಟಿಸ್ ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಮೇ 26 ರಂದು ಬೆಳಿಗ್ಗೆ 9 ಗಂಟೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ.
ಅರ್ಹತೆ:
ಫಿಟ್ಟರ್, ಟರ್ನರ್, ಎಲೆಕ್ಟಿಷಿಯನ್, ವೆಲ್ಡರ್, ಇ.ಎಂ., ಎಂ.ಎ.ವಿ., ಡೀಸೆಲ್ ಮೆಕ್ಯಾನಿಕ್, ಎಂ.ಇ.ವಿ ವೃತ್ತಿಗಳಲ್ಲಿ ಅಂತಿಮ ವರ್ಷದ ತರಬೇತಿ ಪಡೆಯುತ್ತಿರುವವರು ಅಥವಾ ಐಟಿಐ ಪೂರ್ಣಗೊಳಿಸಿದ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಅಗತ್ಯವಿರುವ ದಾಖಲೆಗಳು
ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಎರಡು ಇತ್ತೀಚಿನ ಭಾವಚಿತ್ರಗಳು, ಆಧಾರ್ ಕಾರ್ಡ್ ಪ್ರತಿ, ಬಯೋಡೇಟಾ, ತಮ್ಮ ಸ್ಮಾರ್ಟ್ ಫೋನ್ ಅನ್ನು ತಪ್ಪದೇ ತರಬೇಕು.
ಸೂಚನೆ: ಅಭ್ಯರ್ಥಿಗಳ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
ಅರ್ಹ ಅಭ್ಯರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಿ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಪ್ರಾಚಾರ್ಯ ಕೆ.ಹೆಚ್.ಎಂ. ಪಂಡಿತಾರಾಧ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ 10 ದಿನಗಳ ರಂಗಭೂಮಿ ಕಾರ್ಯಾಗಾರ ಮತ್ತು ನಾಟಕ ಪ್ರದರ್ಶನ
ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ “ಜ್ಞಾನ ಸಾಗರ” ಆವರಣದ ಪ್ರದರ್ಶನ ಕಲೆಗಳ ನಾಟಕ ವಿಭಾಗದ ವತಿಯಿಂದ ದಿವಂಗತ ಶ್ರೀಮತಿ ರಮಣಿಕಾ ಗುಪ್ತಾ ಅವರ ನೆನಪಿನ ಕಾರ್ಯಕ್ರಮದ ಅಂಗವಾಗಿ 10 ದಿನಗಳ ಕಾಲ ರಂಗಭೂಮಿ ಕಾರ್ಯಾಗಾರ ಮತ್ತು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಈ ವಿಶೇಷ ತರಬೇತಿ ಶಿಬಿರ ಮತ್ತು ಕಾರ್ಯಾಗಾರವು ಜೂನ್ 1 ರಿಂದ ಜೂನ್ 10 ರವರೆಗೆ ವಿಶ್ವವಿದ್ಯಾಲಯದ ನಾಟಕ ವಿಭಾಗದಲ್ಲಿ ಜರುಗಲಿದೆ. 10 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ನಾಟಕ ರಚನೆ, ನಿರ್ದೇಶನ, ಕಿರುಚಿತ್ರಗಳ ನಿರ್ಮಾಣ, ಅಭಿನಯ ಹಾಗೂ ರಂಗಭೂಮಿಗೆ ಸಂಬAಧಿಸಿದ ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ.
ಕಾರ್ಯಾಗಾರದ ಪ್ರತಿದಿನ ಬೆಳಿಗ್ಗೆ 10 ರಿಂದ 11.30 ರವರೆಗಿನ ಮೊದಲ ಅವಧಿಯಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ತರಬೇತಿ ನೀಡಲಿದ್ದಾರೆ.
ಜೂನ್ 1 ರಂದು ಉದ್ಘಾಟನಾ ಸಮಾರಂಭ, ನಾಟಕ/ಕಿರುಚಿತ್ರ ಹಾಗೂ ನಾಟಕ ತರಬೇತಿ (ಸಂಪನ್ಮೂಲ ವ್ಯಕ್ತಿ: ಎನ್. ಮಹೇಶ್), ಜೂನ್ 2 ರಂದು ಮೊಬೈಲ್ ಚಿತ್ರಗಳನ್ನು ಸೆರೆಹಿಡಿಯುವುದು (ಸಂಪನ್ಮೂಲ ವ್ಯಕ್ತಿ: ಶೃತಿ) ಮತ್ತು ರಂಗತAಡಗಳ ಕುರಿತು ಮಾಹಿತಿ. ಜೂನ್ 3 ರಂದು ಅಭಿನಯ ಮತ್ತು ಮೂಕಾಭಿನಯದ ತರಬೇತಿ.
ಜೂನ್ 4 ರಂದು ನಿರ್ದೇಶನ ಮತ್ತು ಹೊಸ ಮಾದರಿಗಳ ಅನ್ವೇಷಣೆ. ಜೂನ್ 5 ರಂದು ರಂಗ ಸಂಗೀತದ ಕುರಿತು ವಿಶೇಷ ತರಗತಿ. ಜೂನ್ 6 ರಂದು ರಂಗಭೂಮಿಯ ಸವಾಲುಗಳು ಮತ್ತು ಜನಪದ ರಂಗಭೂಮಿ. ಜೂನ್ 7 ರಂದು ವಿಡಿಯೋ ಮತ್ತು ಆಡಿಯೋ ಸಂಕಲನ ಹಾಗೂ ಬಯಲಾಟ (ಸಂಪನ್ಮೂಲ ವ್ಯಕ್ತಿ: ತಿಪ್ಪೇಸ್ವಾಮಿ). ಜೂನ್ 8 ರಂದು ನಾಟಕಗಳ ಓದು, ಅರ್ಥೈಸಿಕೊಳ್ಳುವಿಕೆ, ರಂಗ ವಿನ್ಯಾಸ ಮತ್ತು ಕಲಾವಿದರ ಮುಖಾಮುಖಿ (ಸಂಪನ್ಮೂಲ ವ್ಯಕ್ತಿ: ಅಧೋನಿ ವೀಣಾ). ಜೂನ್ 9 ರಂದು ಕಲೆ ಮತ್ತು ಕಲಾವಿದರು ಹಾಗೂ ಸಂಸ್ಕೃತಿ ಮತ್ತು ಕಲೆ (ಸಂಪನ್ಮೂಲ ವ್ಯಕ್ತಿ: ಡಾ. ಸುಜಾತ ಜಂಗಮಶೆಟ್ಟಿ). ಜೂನ್ 10 ರಂದು ಸಮಾರೋಪ ಸಮಾರಂಭ ನಡೆಯಲಿದೆ.
ರಂಗಭೂಮಿ ಮತ್ತು ಕಿರುಚಿತ್ರ ನಿರ್ಮಾಣದಲ್ಲಿ ಆಸಕ್ತಿಯಿರುವ ಅಭ್ಯರ್ಥಿಗಳು ತಮ್ಮ ಪರಿಚಯ ಪತ್ರ (ಬಯೋಡೇಟಾ) ಹಾಗೂ ರಂಗಭೂಮಿ ಹಿನ್ನೆಲೆಯ ಅನುಭವದ ವಿವರಗಳನ್ನು (ಇದ್ದಲ್ಲಿ) ಮೇ 30 ರ ಒಳಗಾಗಿ ಮುಖ್ಯಸ್ಥರು, ನಾಟಕ ವಿಭಾಗ, ವಿ.ಶ್ರೀ.ಕೃ.ದೇ.ವಿ. ಬಳ್ಳಾರಿ ಇವರಿಗೆ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಮೊ.9449021006, 7676132277 ಗೆ ಸಂಪರ್ಕಿಸಬಹುದಾಗಿದೆ ಎಂದು ವಿವಿ ಯ ಪ್ರದರ್ಶನ ಕಲೆ ವಿಭಾಗದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

