HomeKarnatakaBIG NEWS: ಮುಖ್ಯಮಂತ್ರಿಗಳೇ ನೀವೇ ನನಗೆ ರಕ್ಷಣೆ ಕೊಡಬೇಕು...ಎಂದ ಸಿ.ಟಿ.ರವಿ

BIG NEWS: ಮುಖ್ಯಮಂತ್ರಿಗಳೇ ನೀವೇ ನನಗೆ ರಕ್ಷಣೆ ಕೊಡಬೇಕು…ಎಂದ ಸಿ.ಟಿ.ರವಿ

ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ.ರವಿಯವರಿಗೂ ಸ್ವಲ್ಪ ಟ್ರೀಟ್ ಮೆಂಟ್ ಕೊಡಬೇಕು ಎಂದು ಹೇಳಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕಿಡಿಕಾರಿರುವ ಸಿ.ಟಿ.ರವಿ, ಡಿ.ಕೆ.ಶಿ ಅವರಿಗೆ ತಮ್ಮ ಹಳೆಯ ಘಟನೆಗಳು ನೆನಪಾಗುತ್ತಿವೆಯೇನೋ. ಅದಕ್ಕೆ ಅಂತಹ ಪದ ಬಳಕೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಅಧಿಕಾರದ ಮದ ಅವರನ್ನು ಹಾಗೇ ಮಾತನಾಡಿಸುತ್ತಿದೆ. ನಾನು ಸೋತಿದ್ದೀನಿ, ಅವರು ಗೆದ್ದಿದ್ದಾರೆ. ಅಲ್ಲದೇ ಅವರು ಈ ದೇಶದ ಶ್ರೀಮಂತ ಬೇರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದರು. ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂದು. ಹಾಗಾಗಿ ಕೊತ್ವಾಲ್ ರಾಮಚಂದ್ರನ ಶಿಷ್ಯನಾಗಿ ಏನಾದರೂ ಮಾಡುವರೋ ಎಂಬ ಆತಂಕ ನನಗೆ ಶುರುವಾಗಿದೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರಿಗೆ ಎಲ್ಲರಿಗೂ ಟ್ರೀಟ್ ಮೆಂಟ್ ಕೊಡುವ ಹುಮ್ಮಸ್ಸು. ಹಾಗಾಗಿ ಮುಖ್ಯಮಂತ್ರಿಗಳೇ ನೀವೇ ನನಗೆ ರಕ್ಷಣೆ ನೀಡಬೇಕು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular