ಚಿಕ್ಕಮಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದದಲ್ಲಿ ಮೊದಲ ಹಂತದಲ್ಲೇ ಖಾತೆ ಹಂಚಿಎಕೆ ವಿಚಾರವಾಗಿ ಅಸಮಾಧಾನಗೊಂಡು ಹಿರಿಯ ಸಚಿವರು ರಾಜೀನಾಮೆ ನೀಡಿದ್ದಾರೆ. ನಗರಾಭಿವೃದ್ಧಿ ಖಾತೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಬಗ್ಗೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟೆ,.ರವಿ, ಆರಂಭದಲ್ಲೇ ಸಚಿವರ ರಾಜೀನಾಮೆ ಒಳ್ಳೆಯ ಬೆಳವಣಿಗೆಯಲ್ಲ. ಇದು ಕಾಂಗ್ರೆಸ್ ಸರ್ಕಾರದ ಆಂತರಿಕ ಒಳಬೇಗುದಿಯ ಸ್ಫೋಟ ಎಂದು ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಸಿಕ್ಸರ್ ಹೊಡೆದಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಎರಡನೇ ಬಾಗ್ ಗೆ ಹಿಟ್ ವಿಕೆಟ್ ಆಗಿದ್ದಾರೆ ಎಂದು ವ್ಯಕ್ಗ್ಯವಾಡಿದರು. ಖಾತೆ ಹಂಚಿಕೆಯಾದ ಒಂದೇ ದಿನದಲ್ಲಿ ಹಿರಿಯ ಸಚಿವರೊಬ್ಬರು ಅಸಮಾಧಾನಗೊಂಡು ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಸರ್ಕಾರ ಎಷ್ಟರ ಮಟ್ಟಿಗೆ ಮುಂದಿನ ದಿನಗಳಲ್ಲಿ ನಿಭಾಯಿಸಬಹುದು? ಎಂಬುದನ್ನು ಈಗಲೇ ನೋಡಬಹುದು ಎಂದರು.
ಮೊದಲ ಹಂತದ ವಿಸಂಪುಟ ಸ್ತರಣೆಯಲ್ಲಿಯೇ ಹಿರಿಯ ಸಚಿವರ ರಾಜೀನಾಮೆ ಆಗಿರುವುದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಈಗಲೇ ಹೀಗಾದರೆ ಇನ್ನು ಪೂರ್ಣ ಪ್ರಮಾಣವದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿ ಖಾತೆ ಹಂಚಿಕೆಯಾದ ಮೇಲೆ ಘಟಸ್ಫೋಟವೇ ಆಗಬಹುದು ಎಂದರು.
ಅಸಮಾಧಾನ ಎನ್ನುವುದು ಇದ್ದೇ ಇರುತ್ತದೆ, ಅಸಮಾಧಾನ ಬಹಿರಂಗವಾಗದಂತೆ ನೋಡಿಕೊಳ್ಳಬೇಕು. ಆದರೆ ಈ ಸರ್ಕಾರದಲ್ಲಿ ಹಿರಿಯ ಸಚಿವರೇ ಖಾತೆ ವಿಚಾರವಾಗಿ ಅಸಮಾಧಾನಗೊಂಡಿದ್ದು, ಅಸವರ ಅಸಮಾಧಾನ ಶಮನ ಮಾಡಲು ಇವರಿಂದ ಸಾಧ್ಯವಾಗಿಲ್ಲ ಎಂದ ಮೇಲೆ ಮುಂದೆ ಏನಾಗಬಹುದು ನೀವೇ ಯೋಚಿಸಿ. ಅಸಮಾಧಾನವನ್ನು ಶಮನ ಮಾಡಬೇಕಿತ್ತು. ಅವರು ರಾಜೀನಾಮೆ ಹಂತಕ್ಕೆ ಹೋಗದಂತೆ ತಡೆಯಬೇಕಿತ್ತು. ಈಗಲೇ ಹೀಗಾದರೆ ಮುಂದಿನ ದಿನಗಳಲ್ಲಿ ಇವರು ಯಾವ ರೀತಿ ಆಡಳಿತ ನೀಡುತ್ತಾರೆ ಎಂದು ಜನರೇ ಪ್ರಶ್ನಿಸುವಂತಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರು ಅಸಮಾಧಾನ ವ್ಯಕ್ತಪಡಿಸಬೇಹುದು. ಈ ಬೆಳವಣಿಗೆ ಸರ್ಕಾರ ಪತನಕ್ಕೂ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

