HomeKarnatakaBIG NEWS: ವಕ್ಫ್ ಅಕ್ರಮದ ಹಿಂದೆ ಸಿಎಂ ಕೈವಾಡವಿದೆ: ಸಿದ್ದರಾಮಯ್ಯ ಎರಡು ರೀತಿ ಆಕ್ಟ್ ಮಾಡುತ್ತಿದ್ದಾರೆ:...

BIG NEWS: ವಕ್ಫ್ ಅಕ್ರಮದ ಹಿಂದೆ ಸಿಎಂ ಕೈವಾಡವಿದೆ: ಸಿದ್ದರಾಮಯ್ಯ ಎರಡು ರೀತಿ ಆಕ್ಟ್ ಮಾಡುತ್ತಿದ್ದಾರೆ: ಸಿ.ಟಿ. ರವಿ ಗಂಭೀರ ಆರೋಪ

ಚಿಕ್ಕಮಗಳೂರು: ವಕ್ಫ್ ಬೋರ್ಡ್ ನಿಂದ ರೈತರ ಭೂಮಿ ಕಬಳಿಸಲಾಗುತ್ತಿದೆ. ರಾಜ್ಯದಲ್ಲಿ ವಕ್ಫ್ ಮಂಡಳಿಯನ್ನು ರದ್ದು ಮಾಡಬೇಕು ಎಂದು ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ವಕ್ಫ್ ಬೋರ್ಡ್ ಅಕ್ರಮದ ಹಿಂದೆ ಸಿಎಂ ಸಿದ್ದರಾಮಯ್ಯ ಕೈವಾಡವಿದೆ. ಅವರೇ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ನಾನು ಈ ಹಿಂದೆಯೇ ಸಿದ್ದರಾಮಯ್ಯ ಅವರ ಕುರಿತು ಹೇಳಿದ್ದೆ. ಸಿದ್ದರಾಮಯ್ಯ ವರ್ತನೆ ಸಿದ್ರಾಮುಲ್ಲಾಖಾನ್ ರೀತಿ ಇದೆ ಎಂದು. ಅವರು ಎರಡು ರೀತಿ ಆಕ್ಟ್ ಮಾಡುತ್ತಾರೆ. ಹಿಂದೂಗಳ ವೋಟ್ ಬೇಕಾದರೆ ಸಿದ್ದರಾಮಯ್ಯ ಆಗ್ತಾರೆ. ಮುಸ್ಲಿಂರ ವೋಟ್ ಬೇಕಾದರೆ ಸಿದ್ರಾಮುಲ್ಲಾ ಖಾನ್ ಆಗ್ತಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಈಗ ವಕ್ಫ್ ಅಕ್ರಮದಲ್ಲಿ ಸಿಎಂ ನೇರವಾಗಿ ಭಾಗಿಯಾಗಿದ್ದಾರೆ. ರಾಜ್ಯದಲ್ಲಿರುವ ವಕ್ಫ್ ಬೋರ್ಡ್ ಮೊದಲು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular