HomeKarnatakaBIG NEWS: ದೆಹಲಿ ಕಚೇರಿ ಮುಚ್ಚಿದ್ದೇನೆ; ಸಿಬ್ಬಂದಿಗೆ ಧನ್ಯವಾದ ತಿಳಿಸಲು ಹೋಗುತ್ತಿದ್ದೇನೆ ಎಂದ ಸಿ.ಟಿ ರವಿ

BIG NEWS: ದೆಹಲಿ ಕಚೇರಿ ಮುಚ್ಚಿದ್ದೇನೆ; ಸಿಬ್ಬಂದಿಗೆ ಧನ್ಯವಾದ ತಿಳಿಸಲು ಹೋಗುತ್ತಿದ್ದೇನೆ ಎಂದ ಸಿ.ಟಿ ರವಿ

ಬೆಂಗಳೂರು: ಮಾಜಿ ಶಾಸಕ ಸಿ.ಟಿ.ರವಿಗೆ ಹೈಕಮಾಂಡ್ ತುರ್ತು ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಲು ಹೋಗುತ್ತಿದ್ದೇನೆ ಎಂದಿದ್ದಾರೆ.

ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿ.ಟಿ,ರವಿ, ದೆಹಲಿಯ ನನ್ನ ಕಚೇರಿ ಮುಚ್ಚಿದ್ದೇನೆ. ಹೀಗಾಗಿ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಹೋಗುತ್ತಿದ್ದೇನೆ. ಹಾಗೇ ಕೆಲ ಸಹೋದ್ಯೋಗಿಗಳನ್ನು ಭೇಟಿಯಾಗಿ ಮೂರ್ನಾಲ್ಕು ದಿನಗಳಲ್ಲಿ ವಾಪಸ್ ಆಗುತ್ತೇನೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯಾಧ್ಯಕ್ಷ ಸ್ಥಾನ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಬೇಕಾದರೂ ಕೊಡಲಿ. ನಮ್ಮದೇನೂ ತಕರಾರಿಲ್ಲ. ಯಾವಾಗ ಮಾಡುತ್ತಾರೆ ಅನ್ನೋದೂ ನನಗೆ ಗೊತ್ತಿಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular