HomeKarnatakaಊರು ಕೊಳ್ಳೆಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಯ್ತು: ಸಿಎಂ ಸಿದ್ದರಾಮಯ್ಯಗೆ ಸಿ.ಟಿ.ರವಿ ತಿರುಗೇಟು

ಊರು ಕೊಳ್ಳೆಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಯ್ತು: ಸಿಎಂ ಸಿದ್ದರಾಮಯ್ಯಗೆ ಸಿ.ಟಿ.ರವಿ ತಿರುಗೇಟು

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ ಅವರು ಮೂಡಾ ಸೈಟ್ ಗಳನ್ನು ವಪಾಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ, ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದು ಸಿದ್ದರಾಮಯ್ಯ ಅವರ ಪ್ರಾಮಾಣಿಕ ನಿರ್ಧಾರವಲ್ಲ. ಸಂವಿಧಾನಕ್ಕಿಂತ ನಾನೇ ಮೇಲು ಎನ್ನುವ ಮನೋಭಾವ ಸಿದ್ದರಾಮಯ್ಯ ಹೊಂದಿದ್ದರು. ಅವರು ಪ್ರಾಮಾಣಿಕರಾಗಿದ್ದರೇ ಮೊದಲೇ ಸೈಟ್ ವಾಪಾಸ್ ಕೊಡಬೇಕಿತ್ತು ಎಂದರು.

ಈಗ ಇಡಿ ಪ್ರವೇಶ ಮಾಡಿದ ಮೇಲೆ ಏಕಾಏಕಿ ಸೈಟ್ ವಾಪಾಸ್ ಕೊಟ್ಟಿದ್ದಾರೆ. ಮುಡಾದಲ್ಲಿ ಸಾವಿರಾರು ಕೋಟಿ ಹಗರಣವಾಗಿದೆ. ಜಿಲ್ಲಾಧಿಕಾರಿ ಪತ್ರ ಬರೆದಿರುವುದೇ ಇದಕ್ಕೆ ಉದಾಹರಣೆ. ಸಾವಿರಾರು ಕೋಟಿ ಅಕ್ರಮದ ತನಿಖೆ ನಡೆಯಬೇಕು. ಯಾರು ಯಾರು ತಪ್ಪು ಮಾಡಿದ್ದಾರೆ ಎಂಬುದು ಬಹಿರಂಗವಾಗಬೇಕಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular