HomeKarnatakaBREAKING NEWS: ಸಿ.ಟಿ.ರವಿ ಪ್ರಕರಣದಲ್ಲಿ ಮೊದಲ ತಲೆದಂಡ: ಖಾನಾಪುರ ಸಿಪಿಐ ಸಸ್ಪೆಂಡ್

BREAKING NEWS: ಸಿ.ಟಿ.ರವಿ ಪ್ರಕರಣದಲ್ಲಿ ಮೊದಲ ತಲೆದಂಡ: ಖಾನಾಪುರ ಸಿಪಿಐ ಸಸ್ಪೆಂಡ್

ಬೆಳಗಾವಿ: ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ತಲೆದಂದವಾಗಿದೆ. ಬೆಳಗಾವಿಯ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಮಂಜುನಾಥ್ ನಾಯಕ್ ಅಮಾನತುಗೊಂಡಿರುವ ಖಾನಾಪುರ ಸಿಪಿಐ. ಕರ್ತವ್ಯ ಲೋಪ ಆರೋಪದಲ್ಲಿ ಐಜಿಪಿ ವಿಕಾಸ್ ಕುಮಾರ್ ಸಿಪಿಐ ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಿ.ಟಿ.ರವಿ ಅವರನ್ನು ಬಂಧಿಸಿ ಖಾನಾಪುರ ಠಾಣೆಗೆ ಕರೆತಂದಿದ್ದ ವೇಳೆ ಬಿಜೆಪಿ ನಾಯಕರನ್ನು ಠಾಣೆಯ ಒಳಗೆ ಬಿಟ್ಟಿದ್ದಕ್ಕೆ ಸಿಪಿಐ ಮಂಜುನಾಥ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಅಂದು ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಇದ್ದರು. ಆದಾಗ್ಯೂ ಈಗ ಸಿಪಿಐ ಮಂಜುನಾಥ್ ಅವರನ್ನು ಮಾತ್ರ ಅಮಾನತು ಮಾಡಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular