HomeEntertainment'ಸಿ' ಚಿತ್ರದ ಟ್ರೈಲರ್ ರಿಲೀಸ್

‘ಸಿ’ ಚಿತ್ರದ ಟ್ರೈಲರ್ ರಿಲೀಸ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ‘ಸಿ’ ಚಿತ್ರದ ಟ್ರೈಲರ್ ನಿನ್ನೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರ ಮನ ಮುಟ್ಟಿದೆ. ಟೈಲರ್ ಗಮನಿಸಿದರೆ ಇದೊಂದು ತಂದೆ ಮಗಳ ಭಾವನಾತ್ಮಕ ಕಥೆಯುಳ್ಳ ಸಿನಿಮಾ ಎಂದು ಹೇಳಲಾಗಿದೆ.

ಕಿರಣ್ ಸುಬ್ರಮಣಿ ನಿರ್ದೇಶಿಸುವ ಮೂಲಕ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ಬಾಲ ನಟಿ ಸಾನ್ವಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನಟನಾ, ಶ್ರೀಧರ್ ರಾಮ್, ಆರ್ಯ, ಶ್ರೀಕಾಂತ್ ಪಾಟೀಲ್, ಮಧುಮಿತಾ, ಚೈತ್ರ, ನಿರ್ಮಲಾ ನಾದನ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಶಿವು ಎಸ್ ಸಾಹಸ ನಿರ್ದೇಶನ, ಸುಂದರ್ ರಾವ್ ಸಂಕಲನ, ಗೀತಾ ಅವರ ನೃತ್ಯ ನಿರ್ದೇಶನ, ನವೀನ್ ಸೂರ್ಯ, ವೀರೇಶ್ ಕುಮಾರ್ ಅವರ ಛಾಯಾಗ್ರಾಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular