ಹಾವೇರಿ: ಹಾವೇರಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನ ಕಾಯಿ ದರ ಕ್ವಿಂಟಾಲ್ ಗೆ 89 ಸಾವಿರ ರೂ. ದಾಖಲೆಯ ದರಕ್ಕೆ ಮಾರಾಟವಾಗಿದೆ.
ಫೆಬ್ರವರಿ 16ರ ಸೋಮವಾರ ಬ್ಯಾಡಗಿ ಮೆಣಸಿನಕಾಯಿ ಪ್ರತಿ ಕ್ವಿಂಟಾಲ್ ಗೆ 89 ಸಾವಿರ ರೂ., ಕಡ್ಡಿ ಮೆಣಸಿನ ಕಾಯಿ 69 ಸಾವಿರ ರೂಪಾಯಿ ದರಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ರೋಣ ತಾಲೂಕಿನ ಸವಡಿ ಗ್ರಾಮದ ರೈತ ವಿಜಯ ಕುಮಾರ ಪ್ರಕಾಶ್ ಸಜ್ಜನರ ಅವರು ಬೆಳೆದ ಬ್ಯಾಡಗಿ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ 89 ಸಾವಿರ ರೂ. ಮತ್ತು ಕಡ್ಡಿ ಮೆಣಸಿನಕಾಯಿಗೆ 69 ಸಾವಿರ ರೂಪಾಯಿಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದೆ.
ಈ ದರಕ್ಕೆ ಇದುವರೆಗೂ ಯಾವುದೇ ತಳಿಯ ಮೆಣಸಿನಕಾಯಿ ಮಾರಾಟವಾಗಿರಲಿಲ್ಲ. ಅನೇಕ ವರ್ಷಗಳಿಂದ ಈ ತಳಿಯ ಮೆಣಸಿನಕಾಯಿ 50 ರಿಂದ 60 ಸಾವಿರ ರೂಪಾಯಿ ಮಾರಾಟವಾಗುತ್ತಿತ್ತು. ಈಗ ದಾಖಲೆಯ 89 ಸಾವಿರ ರೂ. ಮತ್ತು 69 ಸಾವಿರ ರೂಪಾಯಿಗೆ ಮಾರಾಟವಾಗಿವೆ. ಕಳೆದ ವಾರ ಸವಡಿ ಗ್ರಾಮದ ರೈತ ಶರಣಪ್ಪ ಇಟಗಿ ಬೆಳೆದ ಮೆಣಸಿನಕಾಯಿ ಪ್ರತಿ ಕ್ವಿಂಟಾಲ್ ಗೆ 87,786 ರೂಪಾಯಿಗೆ ಮಾರಾಟವಾಗಿತ್ತು.

