HomeLatest Newsತೆರಿಗೆ ವಂಚನೆ ಪ್ರಕರಣ: RTO ಅಧಿಕಾರಿಗಳಿಂದ 10ಕ್ಕೂ ಹೆಚ್ಚು ಐಷಾರಮಿ ಬಸ್ ಗಳು ಜಪ್ತಿ

ತೆರಿಗೆ ವಂಚನೆ ಪ್ರಕರಣ: RTO ಅಧಿಕಾರಿಗಳಿಂದ 10ಕ್ಕೂ ಹೆಚ್ಚು ಐಷಾರಮಿ ಬಸ್ ಗಳು ಜಪ್ತಿ

ಚಿಕ್ಕಬಳ್ಳಾಪುರ: ತೆರಿಗೆ ಕಟ್ಟದೇ ರಾಜ್ಯದಲ್ಲಿ ಸಂಚರಿಸುತ್ತಿದ್ದ್ 10ಕ್ಕೂ ಹೆಚ್ಚು ಐಷಾರಾಮಿ ಖಾಸಗಿ ಬಸ್ ಗಳನ್ನು ಆರ್.ಟಿ.ಒ ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರದ ಬಳಿ ಕಾರ್ಯಾಚರಣೆ ನಡೆಸಿದ ಆರ್.ಟಿ.ಒ ಅಧಿಕಾರಿಗಳು 10ಕ್ಕೂ ಹೆಚ್ಚು ಖಾಸಗಿ ಬಸ್ ಗಳನ್ನು ಸೀಜ್ ಮಾಡಿದ್ದಾರೆ.

ಹೈದರಾಬಾದ್ ಸೇರಿದಂತೆ ವಿವಿಧೆಡೆಗಳಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡಲಾಗಿದೆ. ನಾಗಾಲ್ಯಾಂಡ್, ಅರುಣಾಚಲಪ್ರದೇಶ ಸೇರಿ ಬೇರೆ ಬೇರ‍ೆ ರಾಜ್ಯಗಳ ನೋಂದಣಿ ಹೊಂದಿದ್ದ ಬಸ್ ಗಳನ್ನು ಜಪ್ತಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular