HomeIndiaಬಸ್ ನಲ್ಲಿಯೇ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಮಹಿಳಾ ಕಂಡಕ್ಟರ್

ಬಸ್ ನಲ್ಲಿಯೇ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಮಹಿಳಾ ಕಂಡಕ್ಟರ್

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತುಂಬುಗರ್ಭಿಣಿಯೊಬ್ಬರು ಬಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತುಂಬು ಗರ್ಭಿಣಿ ಸಂಧ್ಯಾ ಎಂಬುವವರು ತನ್ನ ಕುಟುಂಬದ ಜೊತೆ ರಕ್ಷಾ ಬಂಧನ ಹಬ್ಬಕ್ಕಾಗಿ ಮೆಹಬೂಬ ನಗರದ ವನಪರ್ತಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ನಾಚನಹಳ್ಳಿ ಬಳಿ ಬರುತ್ತಿದ್ದಂತೆ ಮಹಿಳೆಗೆ ಹೆರಿಗೆ ನೋವು ಶುರುವಾಗಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಗಮನಿಸಿದ ಲೇಡಿ ಕಂಡಕ್ಟರ್ ಭಾರತಿ, ಬಸ್ ನಿಲ್ಲಿಸಲು ಹೇಳಿದ್ದಾರೆ.

ತಕ್ಷಣ ಬಸ್ ನಲ್ಲಿದ್ದ ನರ್ಸ್ ಒಬ್ಬರ ಸಹಾಯದಿಂದ ಬಸ್ ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಬಾಣಂತಿ ಹಾಗೂ ಮಗು ಆರೋಗ್ಯದಿಂದ ಇದ್ದಾರೆ. ಹೆರಿಗೆ ಬಳಿಕ ತಾಯಿ ಹಾಗೂ ಮಗುವನ್ನು ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಿಜಿಎಸ್ಆರ್ ಟಿಸಿ ಅಧಿಕಾರಿಗಳು ಬಸ್ ಕಂಡಕ್ಟರ್ ಭಾರತಿ ಅವರ ಸಮಯ ಪ್ರಜ್ಞೆ ಹಾಗೂ ಮಾನವೀಯತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular