HomeLatest NewsBIG NEWS: ಬಸ್ ಇಳಿಯುವಾಗ ಆಯತಪ್ಪಿ ಬಿದ್ದ ಮಹಿಳೆ: ಪ್ರಯಾಣಿಕಳ ಮೇಲೆಯೇ ಹರಿದು ಹೋದ ಬಸ್;...

BIG NEWS: ಬಸ್ ಇಳಿಯುವಾಗ ಆಯತಪ್ಪಿ ಬಿದ್ದ ಮಹಿಳೆ: ಪ್ರಯಾಣಿಕಳ ಮೇಲೆಯೇ ಹರಿದು ಹೋದ ಬಸ್; ಸ್ಥಳದಲ್ಲೇ ಸಾವು

ತುಮಕೂರು: ಹಬ್ಬಕ್ಕೆಂದು ಮಗಳ ಮನೆಗೆ ಬಂದಿದ್ದ ಮಹಿಳೆ ವಾಪಸ್ ಊರಿಗೆ ಹೋಗುತ್ತಿದ್ದಾಗ ಬಸ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿ ಮಾರಗೊಂಡನಹಳ್ಳಿಯಲ್ಲಿ ನಡೆದಿದೆ.

ಕಾಮಕ್ಕ (64) ಮೃತ ಮಹಿಳೆ. ಗುಡ್ಡದ ಜೋಗಿಹಳ್ಳಿ ಗ್ರಾಮದ ಕಾಮಕ್ಕ ಬಸ್ ಇಳಿಯುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಮಹಿಳೆಯ ಮೇಲೆಯೇ ಬಸ್ ನ ಹಿಂಬದಿ ಚಕ್ರ ಹರಿದು ಹೋಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆಯೇ ಕಾಮಕ್ಕ ಸಾವನ್ನಪ್ಪಿದ್ದಾರೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular