HomeKarnatakaBREAKING NEWS: ಬಸ್ ಹರಿದು ವ್ಯಕ್ತಿಯ ಎರಡೂ ಕಾಲು ಕಟ್

BREAKING NEWS: ಬಸ್ ಹರಿದು ವ್ಯಕ್ತಿಯ ಎರಡೂ ಕಾಲು ಕಟ್

ಹಾವೇರಿ: ಮಗಳ ಮನೆಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಸರ್ಕಾರಿ ಬಸ್ ಹರಿದು ಎರಡೂ ಕಾಲು ಕಟ್ ಆಗಿರುವ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದ ಎದುರು ನಡೆದಿದೆ.

60 ವರ್ಷದ ಕರಿಯಪ್ಪ ಮುಚ್ಚಿಕೊಪ್ಪ ಎಂಬುವವರ ಕಾಲು ಕಟ್ ಆಗಿದೆ. ಹಾವೇರಿ ತಾಲೂಕಿನ ಕನಕಪುರ ನಿವಾಸಿಯಾಗಿರುವ ಕರಿಯಪ್ಪ ಮಗಳ ಮನೆಗೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ನಡೆದು ಹೋಗುತ್ತಿದ್ದ ವ್ಯಕ್ತಿ ಮೇಲೆಯೇ ಬಸ್ ಹರಿದಿದೆ. ಎರಡೂ ಕಾಲುಗಳು ಕಟ್ ಆಗಿ ಕರಿಯಪ್ಪ ರಸ್ತೆಯಲ್ಲೇ ನರಳಾಡಿದ್ದಾರೆ.

ಘಟನೆ ಖಂದಿಸಿ ಹಾವೇರಿ ಬಸ್ ನಿಲ್ದಾಣದ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಬಸ್ ಚಾಲಕ ಮಲ್ಲಿಕಸಾಬ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular