HomeIndiaWatch : ಡಿವೈಡರ್ ಮೇಲೆ ಸ್ಕೂಟರ್ ಚಲಾಯಿಸಿ ಸ್ಟಂಟ್ ಮಾಡಿದ ಪುಂಡ ಸವಾರ : ವಿಡಿಯೋ...

Watch : ಡಿವೈಡರ್ ಮೇಲೆ ಸ್ಕೂಟರ್ ಚಲಾಯಿಸಿ ಸ್ಟಂಟ್ ಮಾಡಿದ ಪುಂಡ ಸವಾರ : ವಿಡಿಯೋ ವೈರಲ್

ತಿರುಚ್ಚಿ : ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಯುವಕನೊಬ್ಬ ತನ್ನ ಬೈಕ್ ಅನ್ನು ರಸ್ತೆ ಡಿವೈಡರ್ ಮೂಲಕ ಅಪಾಯಕಾರಿಯಾಗಿ ಚಲಾಯಿಸಿದ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ.

ಈ ಸ್ಟಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಗಾಬರಿಗೊಳಿಸಿದೆ.
ತಿರುಚ್ಚಿಯ ಕೊಲ್ಲಿಡಂ ನದಿ ಸೇತುವೆಯ ಕಿರಿದಾದ ವಿಭಜಕದಲ್ಲಿ ಯುವ ಸವಾರ ತನ್ನ ಮೋಟಾರು ಬೈಕ್ ಚಲಾಯಿಸಿದ್ದಾನೆ.

ಈ ಕೃತ್ಯವು ಮೇ 23 ರಂದು ಪೆರುಂಬಿಡುಗು ಮುತ್ತುರೈಯರ್ ಅವರ ಜನ್ಮ ದಿನಾಚರಣೆಯ ಆಚರಣೆಯಾದ ‘ಮುತ್ತರೈಯರ್ ಶತಾಯ ಉತ್ಸವ’ದ ಸಂದರ್ಭದಲ್ಲಿ ನಡೆಯಿತು. ತಮ್ಮ ನಾಯಕನನ್ನು ಗೌರವಿಸಲು, ಹಲವಾರು ಯುವ ಸಮುದಾಯದ ಸದಸ್ಯರು ತಿರುಚ್ಚಿಯಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮೋಟಾರು ಬೈಕ್ ಮೆರವಣಿಗೆಯನ್ನು ಪ್ರಾರಂಭಿಸಿದರು. ಈ ವೇಳೆ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular