HomeBusinessವಿದೇಶ ಪ್ರವಾಸ ಪ್ಲ್ಯಾನ್ ಇದೆಯಾ? ಭಾರತದ ₹1 ರೂಪಾಯಿಗೆ ಹೆಚ್ಚು ಮೌಲ್ಯ ಸಿಗುವ ಬಜೆಟ್ ಫ್ರೆಂಡ್ಲಿ...

ವಿದೇಶ ಪ್ರವಾಸ ಪ್ಲ್ಯಾನ್ ಇದೆಯಾ? ಭಾರತದ ₹1 ರೂಪಾಯಿಗೆ ಹೆಚ್ಚು ಮೌಲ್ಯ ಸಿಗುವ ಬಜೆಟ್ ಫ್ರೆಂಡ್ಲಿ ದೇಶಗಳ ಪಟ್ಟಿ

ಬೆಂಗಳೂರು: ವಿದೇಶ ಪ್ರವಾಸ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ದುಬಾರಿ ವೆಚ್ಚ ಎಂಬ ಕಾರಣಕ್ಕೆ ಅನೇಕರು ಈ ಆಸೆಯನ್ನು ಕೈಬಿಡುತ್ತಾರೆ. ಆದರೆ ನಿಮಗೆ ಗೊತ್ತೇ? ಜಗತ್ತಿನಲ್ಲಿ ಕೆಲವು ದೇಶಗಳಿವೆ, ಅಲ್ಲಿ ನಮ್ಮ ದೇಶದ 1 ರೂಪಾಯಿಗೆ ನೂರಾರು ರೂಪಾಯಿಗಳ ಮೌಲ್ಯವಿದೆ ಅಂದರೆ ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡದೆ, ಕಡಿಮೆ ಬಜೆಟ್‌ನಲ್ಲೇ ಈ ಸುಂದರ ದೇಶಗಳನ್ನು ಸುತ್ತಿ ಬರಬಹುದು.

ಭಾರತೀಯ ರೂಪಾಯಿಗೆ ಹೆಚ್ಚಿನ ಮೌಲ್ಯವಿರುವ ದೇಶಗಳು ಇಲ್ಲಿವೆ:

1.ವಿಯೆಟ್ನಾಂ (Vietnam): ಬೀಚ್ ಮತ್ತು ಕ್ರೂಸ್ ಪ್ರವಾಸಗಳಿಗೆ ಇದು ಹೇಳಿ ಮಾಡಿಸಿದ ತಾಣ. ಇಲ್ಲಿ ಭಾರತದ ₹1 ಸುಮಾರು 284 ವಿಯೆಟ್ನಾಮೀಸ್ ಡಾಂಗ್‌ಗೆ ಸಮ! ಅಂದರೆ ನಿಮ್ಮ ಬಳಿ ಇರುವ ₹100 ಇಲ್ಲಿ 28,400 ಡಾಂಗ್ ಆಗುತ್ತದೆ.

2.ಲಾವೋಸ್ (Laos):
ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ದೇಶದಲ್ಲಿ ಭಾರತದ ₹1 ಸರಿಸುಮಾರು 235 ಲಾವೊ ಕಿಪ್ ಆಗಿದೆ. ಇಲ್ಲಿ ₹100 ನೀಡಿ 23,500 ಕಿಪ್ ಮೌಲ್ಯದ ವಸ್ತುಗಳನ್ನು ಖರೀದಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3.ಇಂಡೋನೇಷ್ಯಾ (Indonesia):
ಇತ್ತೀಚಿನ ದಿನಗಳಲ್ಲಿ ಭಾರತೀಯರ ನೆಚ್ಚಿನ ಪ್ರವಾಸಿ ತಾಣವಾಗಿರುವ ಇಲ್ಲಿ ನಮ್ಮ ₹1 ಕ್ಕೆ 183 ಇಂಡೋನೇಷ್ಯಾದ ರೂಪಾಯಿ ಸಿಗುತ್ತದೆ. ಅಂದರೆ ಇಲ್ಲಿನ ₹100ರ ಮೌಲ್ಯ 18,300 ರೂಪಾಯಿಗಳಿಗೆ ಸಮ

4.ಉಜ್ಬೇಕಿಸ್ತಾನ್ (Uzbekistan):
ಇತಿಹಾಸ ಮತ್ತು ಅದ್ಭುತ ವಾಸ್ತುಶಿಲ್ಪ ಇಷ್ಟಪಡುವವರಿಗೆ ಇದು ಬೆಸ್ಟ್. ಇಲ್ಲಿನ ₹1 ಸರಿಸುಮಾರು 131 ಉಜ್ಬೇಕಿಸ್ತಾನ್ ಸೋಮ್‌ಗಳಿಗೆ ಸಮನಾಗಿದೆ. ವಿಶೇಷವೆಂದರೆ ಇಲ್ಲಿಗೆ ಭೇಟಿ ನೀಡಲು ಭಾರತೀಯರಿಗೆ ಇ-ವೀಸಾ ಸೌಲಭ್ಯವೂ ಇದೆ.

5.ಪರಾಗ್ವೆ ಮತ್ತು ಕಾಂಬೋಡಿಯಾ:
ದಕ್ಷಿಣ ಅಮೆರಿಕಾದ ಪರಾಗ್ವೆಯಲ್ಲಿ ನಮ್ಮ ₹1 ಕ್ಕೆ 70 ಗೌರಾನಿಗಳು ಸಿಕ್ಕರೆ, ಅಂಕೋರ್ ವಾಟ್ ದೇವಾಲಯವಿರುವ ಕಾಂಬೋಡಿಯಾದಲ್ಲಿ ₹1 ಸರಿಸುಮಾರು 48 ಕಾಂಬೋಡಿಯನ್ ರಿಯಲ್‌ಗಳಿಗೆ ಸಮಾನವಾಗಿದೆ.

6.ದಕ್ಷಿಣ ಕೊರಿಯಾ (South Korea):
ಆಧುನಿಕ ಶೈಲಿ ಮತ್ತು ಸ್ಟ್ರೀಟ್ ಫುಡ್‌ಗೆ ಹೆಸರಾಗಿರುವ ಇಲ್ಲಿ ಭಾರತದ ₹1 ಸರಿಸುಮಾರು 16 ಕೊರಿಯನ್ ವೊನ್ ಮೌಲ್ಯ ಹೊಂದಿದೆ. ಇಲ್ಲಿನ ₹100 ಎಂದರೆ 1,600 ವೊನ್ ಆಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular