HomeKarnatakaBUDGET BREAKING : ಮಾಜಿ ದೇವದಾಸಿಯರ ʻಮಾಸಾಶನʼ 2,000 ರೂ. ಗೆ ಹೆಚ್ಚಳ : ಸಿಎಂ...

BUDGET BREAKING : ಮಾಜಿ ದೇವದಾಸಿಯರ ʻಮಾಸಾಶನʼ 2,000 ರೂ. ಗೆ ಹೆಚ್ಚಳ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದು ಕರ್ನಾಟಕದ 2024-25ನೇ ಸಾಲಿನ ಬಜೆಟ್ (Karnataka Budget) ಮಂಡಿಸುತ್ತಿದ್ದಾರೆ. ಇದು ಅವರ ದಾಖಲೆಯ 15 ನೇ ಬಜೆಟ್ ಮಂಡನೆ ಆಗಿದೆ.

ಮಾಜಿ ದೇವದಾಸಿಯರ ಮಾಸಾಶನ 1,500 ರೂ.ನಿಂದ 2000 ರೂ. ಹೆಚ್ಚಳ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯಡಿ ನೀಡುವ ಮಾಸಾಶನ 1,200 ರೂ. ಗಳಿಗೆ ಹೆಚ್ಚಳ  ಮಾಡಲಾಗುವುದು. 1,500 ವಿಶೇಷಚೇತನರಿಗೆ ದ್ವಿಚಕ್ರ ವಾಹನ ವಿತರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಮಹಿಳೆಯರಿಗೆ ಆರ್ಥಿಕ ಉತ್ತೇಜನ, ಮಹಿಳಾ ಸ್ವಸಹಾಯ ಗುಂಪುಗಳಿಗೆ 10 ಕೋಟಿ ರೂ. ಅನುದಾನ  ನೀಡಲಾಗುವುದು ಎಂದು ಹೇಳಿದ್ದಾರೆ. ವಕ್ಫ್‌ ಆಸ್ತಿಗಳ ಸಂರಕ್ಷಣೆಗೆ 100 ಕೋಟಿ ರೂ. ಮೀಸಲು, 100 ಮೌಲಾನಾ  ಅಜಾದ್‌ ವಸತಿ ಶಾಲೆಗಳ ನಿರ್ಮಾಣ ಮಾಡಲಾಗುವುದು, ಅಂಗನವಾಡಿ  ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ಯಾಚ್ಯುವಿಟಿ ಸೌಲಭ್ಯ ನೀಡಲಾಗುವುದು, ಅಂಗವಾಡಿ ಕಟ್ಟಡಬಳ ಅಭಿವೃದ್ಧಿಗೆ 300 ಕೋಟಿ ರೂ ಅನುದಾನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular