HomeLatest Newsಬಜೆಟ್ 2026: ಹಿರಿಯ ನಾಗರಿಕರಿಗೆ ಲಾಟರಿ? ಪಿಂಚಣಿ ಏರಿಕೆ ಮತ್ತು ಆರೋಗ್ಯ ವಿಮೆಯಲ್ಲಿ ಸಿಗಲಿದೆಯೇ ಭರ್ಜರಿ...

ಬಜೆಟ್ 2026: ಹಿರಿಯ ನಾಗರಿಕರಿಗೆ ಲಾಟರಿ? ಪಿಂಚಣಿ ಏರಿಕೆ ಮತ್ತು ಆರೋಗ್ಯ ವಿಮೆಯಲ್ಲಿ ಸಿಗಲಿದೆಯೇ ಭರ್ಜರಿ ರಿಯಾಯಿತಿ!

2026ರ ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ದೇಶದ ಹಿರಿಯ ನಾಗರಿಕರಲ್ಲಿ ನಿರೀಕ್ಷೆಗಳು ಗಗನಕ್ಕೇರಿವೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಈ ಬಜೆಟ್‌ನಲ್ಲಿ, ವಯೋವೃದ್ಧರ ಜೀವನ ಸುಗಮಗೊಳಿಸಲು ಸರ್ಕಾರ ಹಲವು ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಹೆಚ್ಚಲಿದೆಯೇ ಮಾಸಿಕ ಪಿಂಚಣಿ? ಸದ್ಯ ಹಿರಿಯ ನಾಗರಿಕರ ವಲಯದಲ್ಲಿ ಕೇಳಿಬರುತ್ತಿರುವ ಅತಿ ದೊಡ್ಡ ನಿರೀಕ್ಷೆಯೆಂದರೆ ಪಿಂಚಣಿ ಹೆಚ್ಚಳ. 70 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಪಿಂಚಣಿ ನೀಡುವ ಹೊಸ ಸ್ಲ್ಯಾಬ್ ಪರಿಚಯಿಸುವ ಬಗ್ಗೆ ತಜ್ಞರು ಚರ್ಚಿಸುತ್ತಿದ್ದಾರೆ. ಎಪಿಎಸ್-95 (EPS-95) ಪಿಂಚಣಿದಾರರು ದೀರ್ಘಕಾಲದಿಂದ ಮಾಡುತ್ತಿರುವ ಬೇಡಿಕೆಯಂತೆ, ಕನಿಷ್ಠ ಮಾಸಿಕ ಪಿಂಚಣಿಯನ್ನು 7,500 ರೂ.ನಿಂದ 9,000 ರೂ.ವರೆಗೆ ಏರಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಧವೆಯರು ಮತ್ತು ವಿಶೇಷ ಚೇತನರಿಗೂ ಈ ಯೋಜನೆಯ ಲಾಭ ವಿಸ್ತರಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ.

ತೆರಿಗೆ ವಿನಾಯ್ತಿಯಲ್ಲಿ ಬದಲಾವಣೆ ನಿರೀಕ್ಷೆ: ಆದಾಯ ತೆರಿಗೆಯಲ್ಲಿ ಸದ್ಯ 60-79 ವರ್ಷದವರಿಗೆ 3 ಲಕ್ಷ ರೂ. ಹಾಗೂ 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಇದೆ. ಈ ಮಿತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗದಿದ್ದರೂ, ಆರೋಗ್ಯ ವಿಮೆ ಮತ್ತು ವೈದ್ಯಕೀಯ ವೆಚ್ಚಗಳ ಮೇಲಿನ ತೆರಿಗೆ ಕಡಿತದ (ಸೆಕ್ಷನ್ 80D) ಮಿತಿಯನ್ನು ಹೆಚ್ಚಿಸುವ ಮೂಲಕ ಹಿರಿಯರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಬಹುದು ಎಂದು ನಿರೀಕ್ಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಗ್ಯ ಕ್ಷೇತ್ರದಲ್ಲಿ ಹೊಸ ಭರವಸೆ: ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದರಿಂದ, ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರೇಜ್ ನೀಡುವ ಆರೋಗ್ಯ ವಿಮಾ ಯೋಜನೆಗಳನ್ನು ಸರ್ಕಾರ ಘೋಷಿಸಬಹುದು. ರಕ್ತದೊತ್ತಡ, ಮಧುಮೇಹ ಮತ್ತು ಮರೆವಿನ ಕಾಯಿಲೆಗಳ (Dementia) ಮುನ್ನೆಚ್ಚರಿಕೆ ತಪಾಸಣೆಗಾಗಿ ವಿಶೇಷ ಶಿಬಿರಗಳು ಹಾಗೂ ಸಣ್ಣ ನಗರಗಳಲ್ಲಿ ಹಿರಿಯರಿಗಾಗಿಯೇ ಪ್ರತ್ಯೇಕ ಒಪಿಡಿ (Geriatric OPD) ಸೌಲಭ್ಯಗಳನ್ನು ಆರಂಭಿಸುವ ನಿಟ್ಟಿನಲ್ಲಿ ಈ ಬಜೆಟ್ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.

ಸಾಮಾಜಿಕ ಜಾಲತಾಣದ ಸುದ್ದಿಗಳ ಬಗ್ಗೆ ಎಚ್ಚರ: ಪಿಂಚಣಿ ಮೊತ್ತ ಈಗಾಗಲೇ ನಿಗದಿಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಇನ್ನೂ ಅಧಿಕೃತವಾಗಿಲ್ಲ. ಇವೆಲ್ಲವೂ ಸದ್ಯಕ್ಕೆ ಕೇವಲ ನಿರೀಕ್ಷೆಗಳಾಗಿದ್ದು, ಫೆಬ್ರವರಿ 1ರ ಬಜೆಟ್ ಭಾಷಣದ ನಂತರವೇ ನಿಖರ ಮಾಹಿತಿ ಹೊರಬೀಳಲಿದೆ. ಅಲ್ಲಿಯವರೆಗೆ ಹಿರಿಯ ನಾಗರಿಕರು ಸರ್ಕಾರದ ನಿರ್ಧಾರಕ್ಕಾಗಿ ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
RELATED ARTICLES

Most Popular