ಮದುವೆಯ ಸಂಭ್ರಮದಲ್ಲಿ ವಧುವೊಬ್ಬರು ತಮ್ಮ ಪ್ರೀತಿಯ ಪತಿಗೆ ಅಚ್ಚರಿಯ ನೃತ್ಯವೊಂದನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಮೆ ಖಾನ್ ಅವರ ಜನಪ್ರಿಯ ಗೀತೆ ‘ಚೌಧರಿ’ ಗೆ ವಧು ಕುಣಿದು ಎಲ್ಲರ ಮನ ಗೆದ್ದಿದ್ದಾರೆ.
ಮೀಟ್ ಮತ್ತು ಜಿನಾಲ್ ಎಂಬ ನವ ಜೋಡಿಯ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಆಗಿದ್ದು, ಈಗಾಗಲೇ 22 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಸಿರು ಬಣ್ಣದ ಸುಂದರ ಉಡುಗೆಯಲ್ಲಿ ವಧು ಜಿನಾಲ್ ವೇದಿಕೆಗೆ ಆಗಮಿಸುತ್ತಿದ್ದಂತೆ, ಕುಣಿಯಲು ಆರಂಭಿಸುತ್ತಾರೆ. ಅವರ ನೃತ್ಯವನ್ನು ಕಂಡು ವರ ಮೀಟ್ ಬೆರಗಾಗುತ್ತಾರೆ, ನಂತರ ಅವರೊಂದಿಗೆ ಸೇರಿ ಕುಣಿಯುತ್ತಾರೆ. ಕುಟುಂಬಸ್ಥರು ಮತ್ತು ಸ್ನೇಹಿತರು ಚಪ್ಪಾಳೆ ತಟ್ಟಿ,ಪ್ರೋತ್ಸಾಹಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ವಧುವಿನ ನೃತ್ಯವನ್ನು ಶ್ಲಾಘಿಸಿದ್ದಾರೆ.