HomeIndiaVIDEO| ಅತ್ತೆ ಮನೆಯಲ್ಲೇ 'ಧಮ್' ಹೊಡೆದ ನವವಧು; ಫೋಟೋ ವೈರಲ್....!

VIDEO| ಅತ್ತೆ ಮನೆಯಲ್ಲೇ ‘ಧಮ್’ ಹೊಡೆದ ನವವಧು; ಫೋಟೋ ವೈರಲ್….!

ಆಗಷ್ಟೇ ಮದುವೆಯಾಗಿದ್ದ ನವ ವಿವಾಹಿತಯೊಬ್ಬಳು ಅತ್ತೆ ಮನೆಗೆ ಕಾಲಿಟ್ಟಾಗ ಬಾಗಿಲು ಹಾಕಿಕೊಂಡು ಧೂಮಪಾನ ಮಾಡಿದ್ದು, ಇದರ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವು ವೇದಿಕೆಗಳಲ್ಲಿ ಡಿಲೀಟ್‌ ಮಾಡಲಾಗಿದ್ದು, ಫೋಟೋ ಮಾತ್ರ ಹರಿದಾಡುತ್ತಿದೆ.

ಈವರೆಗೆ ಹರಿದಾಡುತ್ತಿದ್ದ ವಿಡಿಯೋದಲ್ಲಿ ಕಂಡು ಬರುವಂತೆ ವಧು ತನ್ನ ವಿವಾಹದ ಪೋಷಾಕಿನಲ್ಲೇ ರೂಮ್ ಒಂದರಲ್ಲಿ ಧೂಮಪಾನ ಮಾಡುತ್ತಿದ್ದು, ಈ ವೇಳೆ ಹೊರಗಿನಿಂದ ಆಕೆಯ ಪತಿ ಬಂದಿದ್ದಾನೆ. ಇದರಿಂದ ಗಾಬರಿಗೊಂಡ ಆಕೆ ಸಿಗರೇಟ್ ತುಂಡನ್ನು ಮರೆಮಾಚಲು ಯತ್ನಿಸಿದ್ದು, ಇದರೊಂದಿಗೆ ವಿಡಿಯೋ ಕೊನೆಗೊಂಡಿದೆ.

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸೀಮಾ ಮೀನಾ ಹಂಚಿಕೊಂಡಿದ್ದು, 60,000 ಅನುಯಾಯಿಗಳನ್ನು ಹೊಂದಿರುವ ಅವರು ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. ಈ ವಿಡಿಯೋಗೆ ಪರ – ವಿರೋಧದ ಅಭಿಪ್ರಾಯಗಳು ಕೇಳು ಬಂದಿದ್ದು ಕೆಲವರು ವಧುವಿನ ವರ್ತನೆಯನ್ನು ಆಕ್ಷೇಪಿಸಿದರೆ ಮತ್ತೆ ಕೆಲವರು ಇದು ಆಕೆಯ ಸ್ವಾತಂತ್ರ್ಯ ಎಂದು ಪ್ರತಿಪಾದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular